ರಸಪ್ರಶ್ನೆ ಸ್ಪರ್ಧೆಯಲ್ಲಿ ಹರೀಶ್‌ಗೆ ಪ್ರಥಮ ಸ್ಥಾನ

PRIZE
Published on

ಮೈಸೂರು: ರೋಟರಿ ಅಂತರ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧಾಕೂಟದಲ್ಲಿ ರೋಟರಿ ವಿಜಯನಗರ ಮೈಸೂರು ಕ್ಲಬ್‌ನ ಎಚ್.ಎಂ ಹರೀಶ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾಕೂಟದಲ್ಲಿ ರೋಟರಿ ಕ್ಲಬ್ ವಿಜಯನಗರ ಮೈಸೂರು ಸಂಸ್ಥೆ ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ. ಆ ಮೂಲಕ ರೋಟರಿ ಪ್ರತಿಷ್ಠಿತ ಪ್ರಶಸ್ತಿ ಹಾಗೂ ಪ್ರಮಾಣಪತ್ರ ಸೇರಿದಂತೆ ನಗದು ಬಹುಮಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ನಾಲ್ಕನೇ ಬಾರಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೂ ಹರೀಶ್ ಪಾತ್ರರಾಗಿದ್ದು, ಎರಡು ಬಾರಿ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net