ಅಧ್ಯಕ್ಷರಾಗಿ ಹರೀಶ್, ಉಪಾಧ್ಯಕ್ಷರಾಗಿ ಅಕ್ಷಯ್ ಆಯ್ಕೆ

30-kkr2(5-25 society kik pr, vp ele
Published on

 ಕಿಕ್ಕೇರಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ವೈ. ಹರೀಶ್ ಹಾಗೂ ಉಪಾಧ್ಯಕ್ಷರಾಗಿ ಅಕ್ಷಯ್ ಅವಿರೋಧವಾಗಿ ಆಯ್ಕೆಯಾದರು.

12ನಿರ್ದೇಶಕರು ಇರುವ ಸಂಘಕ್ಕೆ ಶುಕ್ರವಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಹರೀಶ್ ಅಧ್ಯಕ್ಷ ಹಾಗೂ ಅಕ್ಷಯ್ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಉಳಿದ್ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ಇವರು ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್‌ಕುಮಾರ್, ಸಿಇಒ ಪುಟ್ಟರಾಜು ಕಾರ್ಯನಿರ್ವಹಿಸಿದರು.

ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಪುಷ್ಪಮಾಲೆ ಹಾಕಿ ಸಂಭ್ರಮಸಿದರು. ನೂತನ ಅಧ್ಯಕ್ಷ ಕೆ.ವೈ. ಹರೀಶ್ ಮಾತನಾಡಿ, ಕೆಪಿಸಿಸಿ ಸದಸ್ಯ ಸುರೇಶ್ ಹಾಗೂ ನಿರ್ದೇಶಕರ ಸಹಕಾರದಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜಿಲ್ಲೆಯಲ್ಲಿಯೇ ನಂ.1 ಸೊಸೈಟಿ ತಮ್ಮದಾಗಿದ್ದು, ರೈತರಿಗೆ ಸಕಾಲದಲ್ಲಿ ಸಾಲ ಮತ್ತಿತರ ಸವಲತ್ತು ನೀಡಲು ಒತ್ತು ನೀಡಲಾಗುವುದು ಎಂದರು.

ಕೆಪಿಸಿಸಿ ಸದಸ್ಯ ಸುರೇಶ್, ಮುಖಂಡರಾದ ಸಾಸಲು ಈರಪ್ಪ, ಲಕ್ಷ್ಮೀಪುರ ಚಂದ್ರು, ರಾಮಚಂದ್ರು, ಎಲ್.ಪಿ. ದೇವರಾಜು, ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net