ನೂತನ ಅಧ್ಯಕ್ಷರಾಗಿ ಹಾರಿಸ್ ಬಾಖವಿ ಅವಿರೋಧ ಆಯ್ಕೆ

swadeshi renge
Published on

ಮಡಿಕೇರಿ: ಸಿದ್ದಾಪುರ ಸ್ವದೇಶಿ ರೇಂಜ್ ಸಮಿತಿಯ ನೂತನ ಅಧ್ಯಕ್ಷರಾಗಿ ಹಾರಿಸ್ ಬಾಖವಿ ಅವಿರೋಧ ಆಯ್ಕೆಯಾಗಿದ್ದಾರೆ.

ಸಿದ್ದಾಪುರದ ಮುನವ್ವರುಲ್ ಇಸ್ಲಾಮ್ ಮದರಸದಲ್ಲಿ ಇತ್ತೀಚೆಗೆ ನಡೆದ ಸಿದ್ದಾಪುರ ಸ್ವದೇಶಿ ರೇಂಜ್ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ನೌಶಾದ್ ಫೈಝಿ, ಹನೀಫ್ ಮುಸ್ಲಿಯಾರ್, ಸಂಚಾಲಕರಾಗಿ ಹುಸೈನ್ ಅಝ್ಹರಿ ಪಿ.ಎಂ.ರಫೀಕ್ ದಾರಿಮಿ, ಕೋಶಾಧಿಕಾರಿಯಾಗಿ ಹುಸೈಮ್ ಅಝ್ಹರಿ.ಎಂ, ಸದಸ್ಯರಾಗಿ ಸಿದ್ದೀಕ್ ಅಝ್ಹರಿ, ಮೊಹಿದ್ದೀನ್ ಮುಸ್ಲಿಯಾರ್ ಹಾಗೂ ಮುಷ್ತಾಕ್ ದಾರಿಮಿ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳ ಆಯ್ಕೆ ಸಭೆಯ ಮೊದಲು ಸಮಸ್ತ ಸ್ಥಾಪಕ ದಿನಾಚರಣೆ ಹಾಗೂ ಬಾಫಖಿ ತಂಙಲ್ ಅನುಸ್ಮರಣೆ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net