ದೇಲಂಪಾಡಿ ದೇವಳದಲ್ಲಿ ಹರಿಕಥೆ

Bdk_Delampady
Published on

ಕುಂಬಳೆ: ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧನುಪೂಜಾ ಅಂಗವಾಗಿ ಬುಧವಾರ ಶಂ.ನಾ.ಅಡಿಗ ಕುಂಬಳೆ ಅವರಿಂದ ಮನ್ಮಥ ದಹನ ಎಂಬ ಹರಿಕಥಾ ಸಂಕೀರ್ತನೆ ಜರುಗಿತು.

ಚಂದ್ರಶೇಖರ ನಾವಡ ಬಜಕೂಡ್ಲು ಆಶೀರ್ವಚನ ನೀಡಿದರು. ಪುತ್ತಿಗೆ ಗ್ರಾ.ಪಂ. ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಂ.ನಾ.ಅಡಿಗ ಕುಂಬಳೆ ಅವರನ್ನು ಸನ್ಮಾನಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್, ಹರಿಕಥಾ ಸೇವಾಕರ್ತರಾದ ಬಾಲಕೃಷ್ಣ ಭಂಡಾರಿ ಜೆ.ಬಿ.ಪುತ್ತಿಗೆಬೈಲು, ಕ್ಷೇತ್ರ ಪದಾಧಿಕಾರಿಗಳಾದ ಕೇಶವ ಮಾಸ್ತರ್, ಆನಂದ ಎಂ.ಕೆ. ಮೊದಲಾದವರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಡಿ.ರಾಜೇಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net