ಮೇ 18ರಂದು ಹರಿಕಥಾ ಪರಿಷತ್‌ನ ವಾರ್ಷಿಕೋತ್ಸವ

hhhhhhhhhh
Published on



ಮಂಗಳೂರು : ಮಂಗಳೂರು ಹರಿಕಥಾ ಪರಿಷತ್‌ನ 14ನೇ ವಾರ್ಷಿಕೋತ್ಸವ ಮೇ 18ರಂದು ಮಧ್ಯಾಹ್ನ 2.30ರಿಂದ ನಗರದ ಉರ್ವಸ್ಟೋರ್‌ನ ಶ್ರೀ ಮಹಾಗಣಪತಿ ದೇವಸ್ಥಾನದ ಅಂಗಣದಲ್ಲಿ ನಡೆಯಲಿದೆ.
ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು , ರೋಟರಿ ಸಹಾಯಕ ಗವರ್ನರ್ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಉದ್ಯಮಿ ಹರಿದಾಸ್ ಎಸ್.ಪಿ.ಆಚಾರ್ಯ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪರಿಷತ್‌ನ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯ ಹರಿದಾಸ ಯಜ್ಞೇಶ್ ಹೊಸಬೆಟ್ಟು, ಹಿರಿಯ ಕಲಾಪೋಷಕ ರಘುರಾಮ್ ಭಟ್ ಕಣ್ವತೀರ್ಥ, ಹಿರಿಯ ಹಾರ್ಮೋನಿಯಂ, ವಾದಕ ಸತೀಶ್ ಸುರತ್ಕಲ್ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಮಧ್ಯಾಹ್ನ 2.30ರಿಂದ ಹರಿಕಥಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತೆ ಶದ್ಧಾ ಗುರುದಾಸ್ ಅವರಿಂದ ‘ಏಕಲವ್ಯ’ ಹಾಗೂ ಹರಿದಾಸ ಶರತ್ ಶೆಟ್ಟಿ ಪಡುಪಳ್ಳಿ ಅವರಿಂದ ‘ಭಕ್ತ ಕುಂಬಾರ’ ಹರಿಕಥೆ ನಡೆಯಲಿದೆ ಎಂದು ಅವರು ತಿಳಿಸಿದರು.
ಹರಿಕೃಷ್ಣ ಪುನರೂರು, ಸಂಚಾಲಕ ಸುಧಾಕರ ರಾವ್ ಪೇಜಾವರ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಶ್ರೀನಿವಾಸ ಭಟ್ ಕಣ್ವತೀರ್ಥ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net