18ಕ್ಕೆ ಹರಿಹರಪುರ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ

8Koppa01
ಹರಿಹರಪುರ ಹೋಬಳಿ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಸ್.ಎನ್.ಕೃಷ್ಣಮೂರ್ತಿ ಭಟ್ ಬಿಡುಗಡೆಗೊಳಿಸಿದರು.
Published on

ಕೊಪ್ಪ: ಕನ್ನಡ ಸಾಹಿತ್ಯ ಪರಿಷತ್ ಹರಿಹರಪುರ ಹೋಬಳಿ ಘಟಕದಿಂದ ಜ.18ರಂದು ಹರಿಹರಪುರ ಮಠದಲ್ಲಿ ಆಯೋಜಿಸಿರುವ ಪ್ರಥಮ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಭಾನುವಾರ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಸ್.ಎನ್.ಕೃಷ್ಣಮೂರ್ತಿ ಭಟ್ ಅಧ್ಯಕ್ಷತೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಅಧ್ಯಕ್ಷ ಬಿ.ಆರ್.ಅಂಬರೀಶ ಭಂಡಿಗಡಿ, ಒಂದು ದಿನದ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ, ಪುಸ್ತಕಗಳ ಬಿಡುಗಡೆ, ಹಿರಿಯ ಸಾಧಕರಿಗೆ ಗೌರವ ಸಮರ್ಪಣೆ, ಕನ್ನಡ ಮಾಧ್ಯಮ ಶಾಲೆಗಳಿಗೆ ಗೌರವ ಸಮರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷೆ ಎಸ್.ಎಸ್.ಚಂದ್ರಕಲಾ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎ.ಓ.ವೆಂಕಟೇಶ್, ತಾಲೂಕು ಘಟಕದ ಗೌರವ ಕಾರ್ಯದರ್ಶಿ ರಾಘವೇಂದ್ರ, ಹೋಬಳಿ ಘಟಕದ ನಿಕಟಪೂರ್ವಾಧ್ಯಕ್ಷ ದುರ್ಗೇಶ್, ಚಾವಲ್ಮನೆ ಗ್ರಾಮ ಘಟಕದ ಅಧ್ಯಕ್ಷ ವಿಶ್ವನಾಥ್ ಜೋಯಿಸ್ ಇದ್ದರು.
ಸಭೆ ಬಳಿಕ ಸಮ್ಮೇಳನಾಧ್ಯಕ್ಷೆ ವಹಿಸಿಕೊಳ್ಳಲು ಸಾಹಿತಿ ಕೆ.ಎಂ.ರೂಪಕಲಾ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net