ಹರಿಹರೇಶ್ವರ ದೇವಸ್ಥಾನದಲ್ಲಿ 18.98 ಲಕ್ಷ ರೂ. ಹುಂಡಿ ಹಣ

hrr
Published on

ಹರಿಹರ: ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದ ಹುಂಡಿಯಲ್ಲಿ ಒಟ್ಟು 18.98 ಲಕ್ಷ ರೂ. ಸಂಗ್ರಹವಾಗಿದೆ. ಬುಧವಾರ ಹುಂಡಿ ತೆರೆದು ಕಾಣಿಕೆ ಹಣ ಎಣಿಸಿದ್ದು, 17,18,415 ರೂ. ದೊರೆತಿದೆ. ದೇವಸ್ಥಾನದ ಆವರಣದಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಹುಂಡಿಯಲ್ಲಿ 1,79,790 ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ವಾರಿಜಾ ವೆಂಕಟೇಶ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಅಶ್ವಥ್, ಕಂದಾಯ ಅಧಿಕಾರಿ ಎಚ್.ಎಲ್.ಆನಂದ್, ಮುಜರಾಯಿ ಇಲಾಖೆಯ ಸಂಗೀತಾ.ಕೆ.ಜೋಷಿ, ಗ್ರಾಮಲೆಕ್ಕಾಧಿಕಾರಿಗಳಾದ ಹೇಮಂತ್ ಕುಮಾರ್, ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net