

ಹರಿಹರ: ಯೋಗದಿಂದ ಸಧೃಢ ದೇಹ, ಮನಸ್ಸು ಹಾಗೂ ಸದೃಢ ದೇಶ ಕಟ್ಟಲು ಸಾಧ್ಯ ಎಂದು ದಾವಣಗೆರೆಯ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಶಿಕ್ಷಣ ಪ್ರಮುಖ ಪಿ.ಎಸ್. ಬಸವರಾಜಣ್ಣ ತಿಳಿಸಿದರು.
ನಗರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ದಾವಣಗೆರೆಯ ಪತಂಜಲಿ ಯೋಗ ಶಿಕ್ಷಣ ಸಮಿತಿ, ವೇದಾವತಿ ವಲಯದಿಂದ ಹಮ್ಮಿಕೊಂಡಿರುವ 48 ದಿನಗಳ ಯೋಗ ಶಿಬಿರದ ಅಂಗವಾಗಿ ಬುಧವಾರದ ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದು ಪರಂಪರೆಯಲ್ಲಿ ಯೋಗ ವಿಶಿಷ್ಟ ಸ್ಥಾನ ಪಡೆದಿದೆ. ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದೇ ಯೋಗ. ಪ್ರತಿದಿನ ಯೋಗ ಮಾಡಿದರೆ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಇದನ್ನು ಮನಗಂಡ ಬಹುತೇಕ ರಾಷ್ಟ್ರಗಳು ಯೋಗ ಸಾಧನೆಗೆ ಮುಂದಾಗಿವೆ ಎಂದರು.
ಶಿಬಿರದಲ್ಲಿ ಯೋಗ ಮಾತ್ರವಲ್ಲದೆ, ದೇಶದ ಪರಂಪರೆ, ಸಂಸ್ಕಾರ, ಸಂಘಟನೆ, ಸೇವೆ ಬಗ್ಗೆಯೂ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದರು.
ಹರಿಹರೇಶ್ವರ ದೇವಸ್ಥಾನದ ಕಾರ್ಯದರ್ಶಿ ವನಜಾ, ಶಿಕ್ಷಕ ವೀರಭದ್ರಪ್ಪ, ಮೈಲಾರಲಿಂಗೇಶ್ವರ ದೇವಸ್ಥಾನದ ಖಜಾಂಚಿ ಅಣ್ಣಪ್ಪ ಮಾತನಾಡಿದರು. ಮಾತನಾಡಿದರು. ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. ಲೀಲಕ್ಕ ಅವರ ನೇತೃತ್ವದಲ್ಲಿ ಅಗ್ನಿಹೋತ್ರ ಕಾರ್ಯಕ್ರಮ ನಡೆಯಿತು. ನಂತರ ಮಾತೃ ಭೋಜನ ಸವಿದರು.