ವರಮಹಾಲಕ್ಷ್ಮಿ ಪೂಜೆಗೆ ಖರೀದಿ ಜೋರು

Harihara, Vara Mahalakshmi, Festival, Puja,
Published on

ಹರಿಹರ: ನಗರದ ಮಾರುಕಟ್ಟೆಯಲ್ಲಿ ವರ ಮಹಾಲಕ್ಷ್ಮಿ ಪೂಜೆಗಾಗಿ ಗುರುವಾರ ಹೂ, ಹಣ್ಣು, ಬಾಳೆ ಕಂಬ ಹಾಗೂ ಬಾಳೆಎಲೆ ಮತ್ತಿತರ ವಸ್ತುಗಳ ಖರೀದಿ ಜೋರಾಗಿತ್ತು.

ಶ್ರಾವಣ ಹಬ್ಬಗಳ ಮಾಸವೆಂದೇ ಪ್ರಸಿದ್ಧಿ ಇದ್ದು, ಕಳೆದ ವಾರವಷ್ಟೆ ನಾಗರ ಪಂಚಮಿ ಆಚರಿಸಿದ್ದು, ವರ ಮಹಾಲಕ್ಷಿ ್ಮ ಪೂಜೆ ಮಾಡಲಾಗುತ್ತಿದೆ.

ಹೂವು ಮತ್ತು ಹಣ್ಣುಗಳ ಬೆಲೆ ಏರಿದ್ದರೂ ಚೌಕಾಸಿ ಮಾಡಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ಪೋಸ್ಟ್ ಆಫೀಸ್ ಹತ್ತಿರ ರಸ್ತೆಯಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net