ರೈಲು ಸಂಚಾರ ಭಾಗಶಃ ರದ್ದು

new rail new
Published on

ಹುಬ್ಬಳ್ಳಿ : ಅಮರಾವತಿ ಕಾಲನಿ ಮತ್ತು ತೊಳಹುಣಸೆ ಯಾರ್ಡ್​ಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿ ಕೈಗೊಂಡಿದ್ದರಿಂದ ವಿವಿಧ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಫೆ. 11 ರಂದು ಎಸ್​ಎಸ್​ಎಸ್ ಹುಬ್ಬಳ್ಳಿ - ಚಿತ್ರದುರ್ಗ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರ ಹರಿಹರ-ಚಿತ್ರದುರ್ಗ ಮಧ್ಯೆ ಮತ್ತು ಚಿತ್ರದುರ್ಗ- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರ ಚಿತ್ರದುರ್ಗ- ಹರಿಹರ ಮಧ್ಯೆ ಭಾಗಶಃ ರದ್ದುಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ವಲಯದ ಕಚೇರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net