ಮಹಾತ್ಮರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ

HARIHARA SEVALAL JANTHI
Published on

ಹರಿಹರ: ಸಂತ ಸೇವಾಲಾಲರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ ಎಂದು ಉಪನ್ಯಾಸಕ ಶಂಕರ್ ನಾಯ್ಕ ಹೇಳಿದರು.

ನಗರದ ವಿದ್ಯಾನಗರದ ಮಹಜೇನಹಳ್ಳಿ ತಾಂಡಾದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಜನರಲ್ಲಿ ಮೂಢನಂಬಿಕೆ, ತಾರತಮ್ಯ ಭಾವನೆ ಹೋಗಲಾಡಿಸಲು ಪ್ರಯತ್ನ ಮಾಡಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

ತಾಂಡಾದ ಹಟ್ಟಿ ನಾಯ್ಕ ಬಾಬು ರಾಠೋಡ್ ಮಾತನಾಡಿ, ಸೇವಾಲಾಲ್ ಅವರು ಒಬ್ಬ ಅಸಾಮಾನ್ಯ ವ್ಯಕ್ತಿ. ಅವರ ತತ್ವಾದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸೇವಾಲಾಲ್ ಟ್ರಸ್ಟ್ ಅಧ್ಯಕ್ಷ ಪಿ. ರಾಜನಾಯ್ಕ, ಮುಖಂಡರಾದ ಮೂರ್ತಿ ನಾಯ್ಕ, ಎಸ್.ಕೆ. ಸೋಮ್ಲನಾಯ್ಕ, ಪೀಕ್ಲಾನಾಯ್ಕ, ಎಸ್. ಮಂಜನಾಯ್ಕ, ಹನುಮಂತನಾಯ್ಕ, ಕೋಟಿನಾಯ್ಕ, ರಮೇಶ್ ನಾಯ್ಕ, ಎಚ್. ಮಂಜನಾಯ್ಕ, ಅಣ್ಣಪ್ಪ ನಾಯ್ಕ, ರಾಜನಾಯ್ಕ ಆರ್., ಸೋಮ್ಲನಾಯ್ಕ, ರಘುನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net