ಆಟೋ ಚಾಲಕರಿಗೆ ಪಡಿತರ ಕಿಟ್

HRR RSS EDIT 18
ಹರಿಹರದಲ್ಲಿ ಶನಿವಾರ ಆರ್‌ಎಸ್‌ಎಸ್, ರಾಷ್ಟ್ರ ಸೇವಿಕಾ ಸಮಿತಿಯಿಂದ ಗುತ್ತೂರು ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಶಾರದೇಶಾನಂದ ಸ್ವಾಮೀಜಿ, ಡಾ.ಆರ್.ಆರ್.ಖಮಿತ್ಕರ್, ಸುಮನ್ ಖಮಿತ್ಕರ್, ಗುರುದತ್ ಇತರರಿದ್ದರು.
Published on


ಹರಿಹರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಷ್ಟ್ರ ಸೇವಿಕಾ ಸಮಿತಿ ಇಲ್ಲಿನ ಗಾಂಧಿ ನಗರದಲ್ಲಿ ಶನಿವಾರ ಗುತ್ತೂರು ಆಟೋ ನಿಲ್ದಾಣದ 60 ಆಟೋ ಚಾಲಕರಿಗೆ ಪಡಿತರ ಕಿಟ್ ವಿತರಿಸಿತು.

ಹಿರಿಯ ವೈದ್ಯ ಡಾ.ಆರ್.ಆರ್.ಖಮಿತ್ಕರ್ ಮಾತನಾಡಿ, ಕರೊನಾ ಲಾಕ್‌ಡೌನ್‌ನಿಂದ ಉಂಟಾದ ಸಂಕಷ್ಟಗಳನ್ನು ಸರ್ಕಾರ ಒಂದೇ ಪರಿಹರಿಸಲು ಸಾಧ್ಯವಿಲ್ಲ. ಸಂಘ, ಸಂಸ್ಥೆಗಳು, ಶ್ರೀಮಂತರು, ದಾನಿಗಳು ಸಂತ್ರಸ್ತರಿಗೆ ನೆರವಾಗಬೇಕು ಎಂದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಶಾರದೇಶಾನಂದ ಸ್ವಾಮೀಜಿ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರಕ ಗುರುದತ್, ರಾಷ್ಟ್ರ ಸೇವಿಕಾ ಸಮಿತಿ ಸಂಚಾಲಕಿ ಸುಮನ್ ಖಮಿತ್ಕರ್, ಯೋಗಪಟು ಡಾ.ಕೆ.ಜೈಮುನಿ, ಶೀತಲ್ ಲದ್ವಾ, ಮೀನಾ ಭೂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net