

ಹರಿಹರ: ತಾಲೂಕಿನಲ್ಲಿ ಭಾನುವಾರ ಸುರಿದ ಮಳೆಗೆ 06 ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 5 ಲಕ್ಷ 20 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ತಾಲೂಕಿನ ಗುತ್ತೂರು, ಭಾನುವಳ್ಳಿ, ಸಂಕ್ಲೀಪುರ, ಮಲ್ಲನಾಯ್ಕನಹಳ್ಳಿ, ಬೂದಿಹಾಳು, ಹಿಂಡಸಘಟ್ಟ ಗ್ರಾಮಗಳಲ್ಲಿ ತಲಾ ಒಂದು ಮನೆಗಳಿಗೆ ಹಾನಿ ಉಂಟಾಗಿದೆ. ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದಾರೆ.
ಮಳೆಯ ವಿವರ: ಹರಿಹರ 25 ಮಿಮೀ, ಕೊಂಡಜ್ಜಿ 33.2, ಹೊಳೆಸಿರಿಗೆರೆ 1.2, ಮಲೇಬೆನ್ನೂರು 35, ಒಟ್ಟು 94.4, ಸರಾಸರಿ 23.6 ಮಿಮೀ ಮಳೆಯಾದ ವರದಿಯಾಗಿದೆ.