ಮಳೆ ನೀರು ನಿಂತರೆ ಡೆಂಘೆ ಜ್ವರಕ್ಕೆ ದಾರಿ

Harihara, rain, dengue, fever,
Published on

ಹರಿಹರ: ಮನೆಯ ಹೊರಾಂಗಣ ಮತ್ತು ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ನಿಂತು ಲಾರ್ವ ಉತ್ಪತ್ತಿಯಾಗಿ ಡೆಂೆ ಜ್ವರದ ಪ್ರಕರಣಗಳು ಕಂಡುಬರುವ ಸಾಧ್ಯತೆ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ ಖಾದರ್ ಹೇಳಿದರು.

ತಾಲೂಕಿನ ಹರಗನಹಳ್ಳಿ ಗ್ರಾಮದಲ್ಲಿ ಖಚಿತ ಡೆಂೆ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ಲಾರ್ವ ಸಮೀಕ್ಷೆ ನಡೆಸಿ ನಂತರ ರಾಷ್ಟ್ರೀಯ ಡೆಂೆ ವಿರೋಧಿ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಮನೆಯ ಆವರಣ ಹಾಗೂ ಘನ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ನಿಂತು ಲಾರ್ವ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಲಿವೆ. ಅವುಗಳಿಂದ ಡೆಂೆ ಜ್ವರಕ್ಕೆ ದಾರಿಯಾಗಲಿದೆ ಎಂದರು.

ಜ್ವರ ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬೇಕು. ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಸೊಳ್ಳೆ ಪರದೆ, ಸೊಳ್ಳೆ ನಿವಾರಕ ಔಷಧಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಾಜಪ್ಪ, ಎಂ. ಉಮಣ್ಣ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಆರೋಗ್ಯ ಇಲಾಖೆ ಸಿಬ್ಬಂದಿ ಅಜ್ಮತ್, ಶ್ರುತಿ, ಮಂಗಳಾ ಇತರರಿದ್ದರು.

ಎಚ್‌ಆರ್‌ಆರ್ ಆರೋಗ್ಯ 20
ಹರಿಹರ ತಾಲೂಕಿನ ಹರಗನಹಳ್ಳಿಯಲ್ಲಿ ಡೆಂೆ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಜಾಗೃತಿ ಜಾಥಾಕ್ಕೆ ಟಿಎಚ್‌ಒ ಡಾ. ಅಬ್ದುಲ್ ಖಾದರ್ ಚಾಲನೆ ನೀಡಿದರು. ರಾಜಪ್ಪ, ಎಂ. ಉಮಣ್ಣ, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net