

ಹರಿಹರ: ಪೌಷ್ಟಿಕ ಆಹಾರ ಸೇವನೆ ದೈಹಿಕವಾಗಿ ಸದೃಢವಾಗಲು ಸಹಕಾರಿಯಾಗಲಿದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ನಗರದ ಗುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ಶಾಲಾ ಮಕ್ಕಳ ಅಪೇಕ್ಷೆಯಂತೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ರಾಜ್ಯದ ಶಾಲಾ ಮಕ್ಕಳ ಅಪೌಷ್ಟಿಕತೆ ಹೊಗಲಾಡಿಸಿ, ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗಿ ಮುಂದಿನ ಭವಿಷ್ಯದ ಉತ್ತಮ ಪ್ರಜೆಗಳಾಗಿ ಬೆಳೆಯುಂತಾಗಲಿ ಎಂದು ಹಾರೈಸಿದರು.
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲಾ ಮಕ್ಕಳಿಗೆ ವಾರದಲ್ಲಿ ನಾಲ್ಕು ದಿನ ಪೌಷ್ಟಿಕ ಆಹಾರ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಬುಳ್ಳಪ್ಪರ ಮರಿಯಪ್ಪ, ಉಪಾಧ್ಯಕ್ಷ ರೂಪಾ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆರ್.ವೀರೇಶ್, ಬಿಆರ್‌ಸಿ ಎಚ್.ಕೃಷ್ಣಪ್ಪ, ಸಿಆರ್‌ಪಿ ಕೆ.ಎನ್. ಬಸವರಾಜಯ್ಯ, ಗ್ರಾಮದ ಮುಖಂಡರಾದ ಬಿ.ಯು.ಜಿ.ಮಂಜಪ್ಪ, ನಾಗರಾಜ, ಗುರುನಾಥಪ್ಪ, ಕುರುಬರ ನಿಂಗಪ್ಪ, ಹೊನ್ನಪ್ಪ, ಹನುಮಂತಪ್ಪ, ಅಕ್ಕಮ್ಮ, ಅಬ್ದುಲ್ ರೆಹಮಾನ್ ಇತರರಿದ್ದರು.