ದಾವಣಗೆರೆಯಿಂದ ಬರೋರಿಗೆ ಕಡಿವಾಣ ಹಾಕಿ

HARIHARA NAGARASABHE, MLA MEETING
Published on

ಹರಿಹರ: ದಾವಣಗೆರೆಯಿಂದ ಹರಿಹರ ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಗೆ ಮದ್ಯ ಖರೀದಿಸಲು ಜನರು ಬರುತ್ತಿರುವುದು ಆತಂಕ ಸೃಷ್ಟಿಸಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಶಾಸಕ ಎಸ್.ರಾಮಪ್ಪ ಪೊಲೀಸರಿಗೆ ಸೂಚಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ದಾವಣಗೆರೆಯಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ಅಲ್ಲಿನ ಜನರು ತಾಲೂಕಿಗೆ ಮದ್ಯ ಖರೀದಿಸಲು ಬಂದು ಸೋಂಕು ಹರಡುವ ಅಪಾಯವಿದೆ. ಪೊಲೀಸರು ಇದಕ್ಕೆ ಆಸ್ಪದ ಕೊಡಬಾರದು ಎಂದರು.

ಸಭೆ ನಡೆಯುವ ಸ್ಥಳಕ್ಕೆ ಬಂದ ಶೇರಾಪುರದ ರೈತರು, ತಾಲೂಕಿನ ಬಹುತೇಕ ಕಡೆಗೆ ಬ್ಯಾರಿಕೇಡ್ ಹಾಗೂ ಮುಳ್ಳು ಬೇಲಿ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಜಮೀನುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಒಂದು ರಸ್ತೆಯನ್ನಾದರೂ ತೆರವುಗೊಳಿಸಿ ಅಲ್ಲಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಮಂಜುನಾಥ್ ಗಂಗಲ್, ದಾವಣಗೆರೆಯಿಂದ ಮದ್ಯ ಖರೀದಿ ಮತ್ತಿತರೆ ಕಾರಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಅದನ್ನು ತಡೆಯಲು ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದರು. ಕೊನೆಗೆ ಶಾಸಕರ ಒತ್ತಾಯದ ಮೇರೆಗೆ ಶೇರಾಪುರ ಆಂಜನೇಯ ದೇವಸ್ಥಾನದ ಬಳಿ ಒಂದು ರಸ್ತೆ ತೆರವುಗೊಳಿಸಲು ಒಪ್ಪಿದರು.

ಸಿಪಿಐ ಶಿವಪ್ರಸಾದ್, ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ತಾಪಂ ಇಒ ಲಕ್ಷಿ ್ಮೀಪತಿ, ಟಿಎಚ್‌ಒ ಚಂದ್ರಮೋಹನ, ಎಇಇ ಬಿರಾದಾರ, ಮುಖಂಡರಾದ ಬಿ.ರೇವಣಸಿದ್ದಪ್ಪ, ಫೈರೋಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net