ಸಾರ್ವಜನಿಕ ಗ್ರಂಥಾಲಯ ಆರಂಭಕ್ಕೆ ಆಗ್ರಹ

Harihara, library, beginning,
Published on

ನಗರಸಭೆಗೆ ಆಟೋ ಚಾಲಕರ ಮನವಿ I ಅಧ್ಯಕ್ಷರಿಂದ ಸಕಾರಾತ್ಮಕ ಸ್ಪಂದನೆ

ಹರಿಹರ: ನಗರದ ಜೆ.ಸಿ. ಬಡಾವಣೆಯ 4ನೇ ಮೇನ್, 12ನೇ ಕ್ರಾಸ್ ಹತ್ತಿರದ ಶ್ರೀ ರಾಮಾಂಜನೇಯ ಆಟೋ ಸ್ಟ್ಯಾಂಡ್ ಸಮೀಪ ಸಾರ್ವಜನಿಕ ಗ್ರಂಥಾಲಯ ಆರಂಭಕ್ಕೆ ಆಗ್ರಹಿಸಿ ನೀಲಕಂಠ ಸ್ನೇಹ ಬಳಗ ಟ್ರಸ್ಟ್ ಹಾಗೂ ಆಟೋ ಚಾಲಕರು ಬುಧವಾರ ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್ ಮತ್ತು ಉಪಾಧ್ಯಕ್ಷ ಎಂ.ಜಂಬಣ್ಣ ಅವರಿಗೆ ಮನವಿ ಸಲ್ಲಿಸಿದರು.

ಈ ಹಿಂದೆ ನೀಲಕಂಠ ಸ್ನೇಹ ಬಳಗ ಟ್ರಸ್ಟ್‌ನಿಂದ ಕಳೆದ ವರ್ಷ ಶ್ರೀ ರಾಮಾಂಜನೇಯ ಆಟೋ ಸ್ಟ್ಯಾಂಡ್ ಬಳಿ ನಗರಸಭೆಯ ಮಳಿಗೆ ಇದ್ದು, ಅನುಪಯುಕ್ತವಾಗಿದೆ. ಈ ಸ್ಥಳದಲ್ಲಿ ಗ್ರಂಥಾಲಯ ಆರಂಭಿಸಲು ಮನವಿ ಮಾಡಿಕೊಳ್ಳಲಾಗಿತ್ತು ಎಂದು ನೆನಪಿಸಿಕೊಂಡರು.

ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಲಯದಿಂದ ಸಕಾರಾತ್ಮಕವಾಗಿ ಸ್ಪಂದನೆ ದೊರಕಿತ್ತು. ಆದ್ದರಿಂದ ಮತ್ತೊಮ್ಮೆ ಈ ಭಾಗದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ನಗರಸಭೆಯಿಂದ ಆರಂಭಿಸಿದ್ದಲ್ಲಿ, ಇಲ್ಲಿನ ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವುದಲ್ಲದೆ, ಸ್ವಸ್ಥ ಸಮಾಜಕ್ಕೆ ದಾರಿ ದೀಪವಾಗುತ್ತದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾತನಾಡಿ, ಮುಂಬರುವ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಮಿಕ ಮುಖಂಡ ಎಚ್.ಕೆ ಕೊಟ್ರಪ್ಪ, ಆಟೋ ಚಾಲಕರಾದ ಮಂಜುನಾಥ್, ವೆಂಕಟೇಶ್, ಬಸವರಾಜ್, ಸುನಿಲ್, ರಾಘವೇಂದ್ರ, ವಿ.ಎಸ್.ಸಂತೋಷ್, ರಾಜಪ್ಪ ಗೋಪಾಲ್, ಎಸ್.ನಾಗರಾಜ್, ರಾಜೇಂದ್ರ, ಪರಶುರಾಮ್, ಶಿವರಾಜ್, ಬಿ.ಜಿ.ರಾಜು, ಆರ್. ಸೋಮನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net