ಆರೋಗ್ಯಮಾತೆ ಚರ್ಚ್ ವಾರ್ಷಿಕೋತ್ಸವ 30ರಿಂದ

Harihara, health mother, church,
Published on

ಸೆ. 9ರ ವರೆಗೆ ಧಾರ್ಮಿಕ ಕಾರ್ಯಕ್ರಮ ಧರ್ಮಗುರು ಕೆ.ಎ. ಜಾರ್ಜ್ ಮಾಹಿತಿ

ಹರಿಹರ: ನಗರದ ಬಸಿಲಿಕ ಆರೋಗ್ಯ ಮಾತೆ ಚರ್ಚ್‌ನಲ್ಲಿ ವಾರ್ಷಿಕೋತ್ಸವ ನಿಮಿತ್ತ ಆ. 30ರಿಂದ ಸೆ. 9ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಚರ್ಚ್‌ನ ಧರ್ಮಗುರು ಕೆ.ಎ. ಜಾರ್ಜ್ ಹೇಳಿದರು.

ಆ. 30ರಂದು ಸಂಜೆ 5.30ಕ್ಕೆ ಶಿವಮೊಗ್ಗ ವಲಯ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೋ ಎಸ್.ಜೆ. ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಧ್ವಜಾರೋಹಣದ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆ. 30ರಿಂದ ಸೆ. 7ರ ವರೆಗೆ ನಿತ್ಯವೂ ಸಂಜೆ 5.30ರಿಂದ ಮೆರವಣಿಗೆ, ನವೇನ, ಪುಷ್ಪಾರ್ಪಣೆ, ಪವಿತ್ರ ಬಲಿಪೂಜೆ, ಪರಮ ಪ್ರಸಾದದ ಆರಾಧನೆ, ರೋಗ ಸೌಖ್ಯಕ್ಕಾಗಿ ಪ್ರಾರ್ಥನೆ, ಅನ್ನ ಸಂತರ್ಪಣೆ ನಡೆಯಲಿವೆ. ಸೆ. 7ರಂದು ಸಂಜೆ 5.30ಕ್ಕೆ ಸಾಂಭ್ರಮಿಕ ಬಲಿಪೂಜೆ ಕಾರವಾರದ ಧರ್ಮಾಧ್ಯಕ್ಷ ಡುಮಿಂಗ್ ಡಯಾಸ್ ಅವರಿಂದ ಪೂಜಾರ್ಪಣೆ ನಡೆಯಲಿದೆ ಎಂದರು.

ಸೆ. 8ರಂದು ಬೆಳಗ್ಗೆ 5.15ರಿಂದ ಭದ್ರಾವತಿ ಧರ್ಮಾಧ್ಯಕ್ಷ ಜೋಸೆಫ್ ಅರುಮಚಾಡತ್ ಅವರಿಂದ ಕನ್ನಡ, ತೆಲುಗು, ಮಲಯಾಳಂ ಮತ್ತು ಕಾರವಾರದ ಧರ್ಮಾಧ್ಯಕ್ಷ ಡುಮಿಂಗ್ ಡಯಾಸ್ ತಮಿಳು, ಇಂಗ್ಲಿಷ್ ಭಾಷೆಯಲ್ಲಿ ಪೂಜಾರ್ಪಣೆ, ಶಿವಮೊಗ್ಗ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಎಸ್.ಜೆ. ಅವರಿಂದ ಕನ್ನಡದಲ್ಲಿ ಸಾಂಭ್ರಮಿಕ ಬಲಿಪೂಜೆ ನಡೆಯಲಿದೆ.

ಸಂಜೆ 5ರಿಂದ ಚರ್ಚ್‌ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪುಷ್ಪಾಲಂಕೃತ ತೇರಿನ ಮಹಾ ಮೆರವಣಿಗೆ ನಡೆಯಲಿದೆ. ಸೆ. 9ರಂದು ಬಲಿಪೂಜೆಗಳು ನಡೆಯಲಿವೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net