ಟ್ರಾೃಕ್ಟರ್ ಪಲ್ಟಿಯಾಗಿ 15 ಕೂಲಿ ಕಾರ್ಮಿಕರಿಗೆ ಗಾಯ

Accident_ydxssrp_EXi3o6q
Published on

ಹರಿಹರ: ತಾಲೂಕಿನ ಗುತ್ತೂರು ಸಮೀಪ ಬುಧವಾರ ಟ್ರ್ಯಾಕ್ಟರ್ ಪಲ್ಟಿಯಾಗಿ 15 ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.

ಭತ್ತ ನಾಟಿ ಕಾರ್ಯಕ್ಕೆ ತಾಲೂಕಿನ ಭಾನುವಳ್ಳಿಯಿಂದ ಕೂಲಿಕಾರ್ಮಿಕರನ್ನು ಗುತ್ತೂರು ಬಳಿಯ ಜಮೀನಿಗೆ ಬೆಳಗ್ಗೆ ಟ್ರ್ಯಾಕ್ಟರ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು.

ಹೊಸಪೇಟೆ ಹೆದ್ದಾರಿ ದಾಟಿ ಜಮೀನಿಗೆ ಹೋಗುವ ಮಾರ್ಗದಲ್ಲಿ ಅಪಘಾತ ಸಂಭವಿಸಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಅಪಘಾತ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net