

ಹರಿಹರ: ಸಮಾಜದಲ್ಲಿ ಸಾಕ್ಷರರು ರಾಕ್ಷಸರಾಗುತ್ತಿದ್ದಾರೆ, ಪಂಚೇಂದ್ರಿಯಗಳು ಮಲೀನವಾಗುತ್ತಿವೆ. ಮನುಷ್ಯ ಆತ್ಮಸಾಕ್ಷಿ, ಗುಣವಂತ, ಸ್ವಾಭಿಮಾನದಿಂದ ಬದುಕಬೇಕಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಬಸವರಾಜ್ ನೆಲ್ಲಿ ಅಭಿಪ್ರಾಯಪಟ್ಟರು.
ನಗರದ ಗಿರಿಯಮ್ಮ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ನೊಳಂಬ ಲಿಂಗಾಯತ ವೇದಿಕೆ ಹರಿಹರ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮನುಷ್ಯನಲ್ಲಿ ಓದುವುದಕ್ಕಿಂತ ನೋಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಇದರಿಂದ ಸಂಘ ಜೀವಿಯಾಗಿದ್ದ ಮನುಜ ಏಕಾಂತ ಜೀವನ ಶೈಲಿಯಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಆತಂಕಪಟ್ಟರು.
ವೇದಿಕೆಯ ಆಧ್ಯಕ್ಷ ಎಸ್.ಎಚ್.ಪ್ಯಾಟಿ ಮಾತನಾಡಿ, ನೊಳಂಬ ಲಿಂಗಾಯತ ವೇದಿಕೆಯು ಸಮಾಜದ ಎಲ್ಲಾ ಸ್ಥರದವರನ್ನೂ ಒಟ್ಟಿಗೆ ಕರೆದುಕೊಂಡು ಹೊಗುವ ಕೆಲಸ ಮಾಡುತ್ತದೆ ಎಂದರು.
ಮುಖಂಡರಾದ ಗಿರಿಜಮ್ಮ ವೀರಪ್ಪಯ್ಯ, ಅನಿತಾ ಎಚ್.ಪಾಟೀಲ್, ಮಂಜುನಾಥ್ ಜಿಗಳಿ, ಜಿ.ರಾಮಪ್ಪ, ಸುರೇಶ್ ಹಂಚಿನಗೌಡ್ರು, ಎಚ್.ಎಂ.ಹುಚ್ಚನಗೌಡ್ರು, ಎನ್.ಪಿ.ತಿಮ್ಮನಗೌಡ ಉಪಸ್ಥಿತರಿದ್ದರು.