

ಹರಿಹರ: ಜಿಲ್ಲೆಯ ಪ್ರತಿಯೊಬ್ಬ ಸರ್ಕಾರಿ ನೌಕರರು ಕೆಲಸವನ್ನು ಕಾಯಕ ಎಂದು ಮಾಡಿದರೆ ಲಿಂಗಪೂಜೆಯನ್ನು ಮಾಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ನಗರದ ಗಾಂಧಿ ಮೈದಾನದಲ್ಲಿ ಎಚ್.ಶಿವಪ್ಪ ಅಭಿಮಾನಿಗಳ ಬಳಗ ಆಯೋಜಿಸಿರುವ ಶರಣರ- ಸಾಧಕರ- ಹುತಾತ್ಮರ ಸ್ಮರಣೋತ್ಸವದ 2ನೇ ದಿನ ಭಾನುವಾರ ರಾತ್ರಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಾವು ಒಬ್ಬ ಅಧಿಕಾರಿ ಎಂದು ಸಮಾಜದಲ್ಲಿ ಭೀಗದೇ ನಮ್ಮಿಂದ ನಾಲ್ಕು ಜನಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ಬದುಕಬೇಕು. ಯಾರು ಸೋಲಲಿ ಗೆಲ್ಲಲಿ ಮೊದಲು ನಾವು ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕು ಎಂದರು.
ಮುಂಡರಗಿಯ ತೊಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ವಿಶ್ವಕರ್ಮ ಸುಜ್ಞಾನ ಪೀಠದ ಶಿವಸುಜ್ಞಾನ ಸ್ವಾಮೀಜಿ, 108 ಲಿಂಗೇಶ್ವರ ದೇವಸ್ಥಾನದ ಶ್ರೀ ಬಸವಲಿಂಗ ಸ್ವಾಮೀಜಿ, ಎಂಎಲ್‌ಸಿ ಮೋಹನ್ ಕೊಂಡಜ್ಜಿ, ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಬಳಗದ ಅಧ್ಯಕ್ಷ ಬಿ.ಚಿದಾನಂದಪ್ಪ, ಸಿಇಒ ಕೆಐಎಡಿಬಿ ಬೆಂಗಳೂರಿನ ಎಚ್.ಬಸವರಾಜೇಂದ್ರ, ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಡಿ.ಎಂ.ಹಾಲಸ್ವಾಮಿ, ಹಾಸ್ಯ ಕಲಾವಿದರಾದ ಸುಧಾ ಬರಗೂರು, ಪ್ರೊ.ಕೃಷ್ಣೇಗೌಡ, ಪ್ರೊ.ರಿಚರ್ಡ್ ಲ್ಯೂಯಿಸ್, ಸತ್ಯ ಕಿರ್ಲೂಸ್ಕರ್ ಮತ್ತು ಆನಂದ ಇತರರಿದ್ದರು.