

ಹರಿಹರ: ಶ್ರದ್ಧಾಕೇಂದ್ರಗಳಾದ ದೇವಾಲಯಗಳಲ್ಲಿ ಸ್ವಚ್ಛತೆಗೆ ಧರ್ಮಸ್ಥಳ ಸಂಸ್ಥೆ ಆದ್ಯತೆ ನೀಡಿದೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರ್ ಹೇಳಿದರು.
ನಗರದ ನೀರಾವರಿ ಇಲಾಖೆ ಆವರಣದ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಕಸದ ಡಬ್ಬಿಗಳ ವಿತರಿಸಿ ಮಾತನಾಡಿ, ಸಂಸ್ಥೆಯ ಈ ಯೋಜನೆ ಕೇವಲ ದೇವಸ್ಥಾನಗಳಿಗೆ ಸೀಮಿತವಲ್ಲ. ಮಸೀದಿ, ಚರ್ಚ್‌ಗಳಿಗೂ ಕಸದ ಬುಟ್ಟಿಗಳನ್ನು ವಿತರಿಸಲಾಗುವುದು ಎಂದರು.
ನಗರಸಭಾ ಸದಸ್ಯರಾದ ದಾದಾ ಖಲಂದರ್, ಎಸ್.ಎಂ.ವಸಂತ್, ಮಹಬೂಬ್ ಬಾಷಾ, ಉಷಾ, ನೀತಾ ಮೆಹರ‌್ವಾಡೆ, ದಾದಾಪೀರ್ ಭಾನುವಳ್ಳಿ, ಸಂಸ್ಥೆ ತಾಲೂಕು ನಿರ್ದೇಶಕ ಬಿ.ರಾಘವೇಂದ್ರ, ಮೇಲ್ವಿಚಾರಕಿ ಸಂಗೀತಾ ಪೂಜಾರ್ ಇತರರಿದ್ದರು.