ಶಾಸಕರ ಆರೋಪದಲ್ಲಿ ಹುರುಳಿಲ್ಲ ಎಂದ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ನಂದಿಗಾವಿ

Harihara, Etiquette, Violation, Accusation, Congress,
Published on

ಹರಿಹರ: ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂಬ ಶಾಸಕ ಬಿ.ಪಿ.ಹರೀಶ್ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ನಂದಿಗಾವಿ ಸ್ಪಷ್ಟಪಡಿಸಿದರು.

ನಾನು ವಿದ್ಯಾವಂತ. ನನಗೂ ತಿಳಿವಳಿಕೆ ಇದೆ. ಸರ್ಕಾರಿ ಕಾರ್ಯಕ್ರಮಗಳ ಶಿಷ್ಟಾಚಾರದ ಬಗ್ಗೆ ಮಾಹಿತಿ ಇದೆ. ಅದನ್ನು ಉಲ್ಲಂಘಿಸಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ ಚಾಲನ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮಗಳು ಇರಲಿಲ್ಲ. ಅಲ್ಲಿ ಸಾರ್ವಜನಿಕರಿಗೆ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶವಿತ್ತು. ಇತ್ತೀಚಗೆ ನಡೆದ ಚುನಾವಣೆಯಲ್ಲಿ 59 ಸಾವಿರ ಮತದಾರರು ನನಗೆ ಮತ ಹಾಕಿದ್ದಾರೆ. ಅವರ ಪ್ರತಿನಿಧಿಯಾಗಿ ನನ್ನ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿರುವುದರಲ್ಲಿ ತಪ್ಪಿಲ್ಲ ಎಂದರು.

ನಗರಸಭಾ ಉಪಾಧ್ಯಕ್ಷ ಕೆ.ಜಿ.ಸಿದ್ದೇಶ್, ಸದಸ್ಯರಾದ ಶಂಕರ್ ಖಟಾವಕರ್, ಸೈಯದ್ ಅಲಿಂ, ಎಂ.ಎಸ್ ಬಾಬುಲಾಲ್, ಮುಖಂಡರಾದ ಸೈಯದ್ ಸನಾವುಲ್ಲಾ, ಎಲ್.ಬಿ.ಹನುಮಂತಪ್ಪ, ಅಬಿದಲಿ ಮಲೇಬೆನ್ನೂರು, ದಾದಾಪೀರ್ ಭಾನುವಳ್ಳಿ. ಸಂತೋಷ್ ನೋಟದರ್, ಕಿರಣ್ ಭೂತೆ, ಮಲ್ಲೇಶ್ ಕಮಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net