ಐರಣಿ ಮಠಕ್ಕೆ ಕಸದ ಬುಟ್ಟಿ ವಿತರಣೆ

HRR BUTTI 01
Published on

ಹರಿಹರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಬೈಪಾಸ್ ವಲಯ ಮತ್ತು ಹರಿಹರ ಬಿ. ವಲಯದಿಂದ ಬುಧವಾರ ವಿದ್ಯಾನಗರದ ಐರಣಿ ಮಠ ಮತ್ತು ಆಂಜನೇಯ ಸ್ವಾಮಿ ದೇಗುಲಕ್ಕೆ ತ್ಯಾಜ್ಯ ವಿಲೇವಾರಿ ಬುಟ್ಟಿಗಳನ್ನು ವಿತರಿಸಲಾಯಿತು.

ವಿದ್ಯಾನಗರದ ಐರಣಿ ಮಠದಲ್ಲಿ ಮಂಗಳವಾರ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕಸದ ಬುಟ್ಟಿ ಮತ್ತು ಜನಮಂಗಲ ಕಾರ್ಯಕ್ರಮದಲ್ಲಿ ಸಲಕರಣೆಗಳನ್ನು ವಿತರಿಸಲಾಯಿತು.

ಸಂಘವು ಎಲ್ಲ ವರ್ಗದವರಿಗೂ ವಿವಿಧ ಸೌಲಭ್ಯಗಳನ್ನು ನೀಡುತ್ತ ಬಂದಿದೆ. ಸಂಸ್ಥೆ ನೀಡಿದ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಮಾಜಿ ಸದಸ್ಯ ನಾಗರಾಜ್ ಮೆಹರ‌್ವಾಡೆ, ಎಸ್‌ಕೆಡಿಆರ್‌ಡಿಪಿ ತಾಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿ, ದೇವಸ್ಥಾನ ಕಮಿಟಿ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಮೇಲ್ವಿಚಾರಕರಾದ ಮಂಜುಳಾ, ಶಾರದಾ, ಸೇವಾಪ್ರತಿನಿಧಿಗಳಾದ ಸವಿತಾ, ಗೌರಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net