ಹರಿಹರದಲ್ಲಿ ವ್ಯಾಪಾರ ಅವಧಿ ನಿಗದಿ

HRR SABHE 21
ಹರಿಹರ ನಗರದಲ್ಲಿ ಬುಧವಾರ ಆಯೋಜಿಸಿದ್ದ ವಿತರಕರು, ಸಗಟು, ಚಿಲ್ಲರೆ ಕಿರಾಣಿ ಅಂಗಡಿ ವರ್ತಕರು ಹಾಗೂ ಪುಸ್ತಕ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ವಿತರಕರ ಸಂಘದ ಅಧ್ಯಕ್ಷ ಎಚ್.ಎಸ್.ಶ್ರೀಧರ್ ಮೂರ್ತಿ ಮಾತನಾಡಿದರು. ಕಾರ್ಯದರ್ಶಿ ಪ್ರಕಾಶ ಶ್ರೇಷ್ಠಿ, ಕಿರಾಣಿ ವರ್ತಕರಾದ ಪ್ರಾಣೇಶ್, ಶ್ರೀನಿವಾಸ್, ಅರುಣ್‌ಕುಮಾರ್, ರಾಜ್‌ಗುರು ಇತರರಿದ್ದರು. 
Published on

ಹರಿಹರ: ನಗರದಲ್ಲಿ ಮೇ 21ರಿಂದ 31ರ ವರೆಗೂ ಬೆಳಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ವ್ಯಾಪಾರ ಮಾಡಲು ತೀರ್ಮಾನಿಸಲಾಗಿದೆ ಎಂದು ವಿತರಕರ ಸಂಘದ ಅಧ್ಯಕ್ಷ ಎಚ್.ಎಸ್.ಶ್ರೀಧರ್ ಮೂರ್ತಿ ತಿಳಿಸಿದರು.

ನಗರದಲ್ಲಿ ವಿತರಕರು, ಸಗಟು, ಚಿಲ್ಲರೆ ಕಿರಾಣಿ ಅಂಗಡಿ ವರ್ತಕರು, ಪುಸ್ತಕ ವ್ಯಾಪಾರಿಗಳು ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ದಾವಣಗೆರೆ ನಗರದಲ್ಲಿ ದಿನೇ ದಿನೆ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಗ್ರಾಮೀಣ ಭಾಗದ ಜನರು ಈ ಸಮಯದಲ್ಲಿ ನಗರಕ್ಕೆ ಬಂದು ಹೋಗಲು ಅನುಕೂಲವಾಗಲಿದೆ. ಇದೇ ವೇಳೆ ಅಂಗಡಿಗಳಲ್ಲಿ ವ್ಯಾಪಾರ ಮಾಡುವಾಗ ಸರ್ಕಾರ ಸೂಚನೆಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಘದ ಸದಸ್ಯರಿಗೆ ತಿಳಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.

ವಿತರಕರ ಸಂಘ ಕಾರ್ಯದರ್ಶಿ ಪ್ರಕಾಶ ಶ್ರೇಷ್ಠಿ, ಕಿರಾಣಿ ವರ್ತಕರಾದ ರಾಜ್‌ಗುರು, ಅರುಣ್‌ಕುಮಾರ್, ಪ್ರಾಣೇಶ್, ಶ್ರೀನಿವಾಸ್, ಹಂಬಗಿ ಸಂದೀಪ್, ಬಾಬುಲಾಲ್, ಆರ್.ಬಿ.ಪ್ರದೀಪ್, ಮಸಾಲ ಸತೀಶ್, ರಾಘವೇಂದ್ರ, ಜಿ.ಕೆ.ಮಲ್ಲಿಕಾರ್ಜನ್, ಹಂಬಗಿ ಶ್ರೀನಿವಾಸ್ ಇತರರಿದ್ದರು.   

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net