ಸ್ವಾಮಿ ನೀವಾದ್ರೂ ನಮ್ಮ ಸಮಸ್ಯೆ ಪರಿಹರಿಸಿ: ದಾವಣಗೆರೆ ನೂತನ ಡಿಸಿ ಎದುರು ಅಳಲು ತೋಡಿಕೊಂಡ ಜನ

Davangere, DC, Shivananda Kapashi,
Published on

ಹರಿಹರ: ನಗರದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಭಾನುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ನದಿಯಲ್ಲಿ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿ ಗಂಗಾನಗರದ ಕೆಲವು ಮನೆಗಳು ಜಲಾವೃತಗೊಂಡ ಪ್ರದೇಶವನ್ನು ವೀಕ್ಷಿಸಿ, ನಿವಾಸಿಗಳ ಸಮಸ್ಯೆ ಆಲಿಸಿದರು. ಹಲವು ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಮಳೆಗಾಲದಲ್ಲಿ ಸಮೀಪದ ಹಳ್ಳದ ನೀರಿನಿಂದ ಮನೆಗಳು ಜಲಾವೃತಗೊಳ್ಳುತ್ತವೆ, ನಮ್ಮ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಮನವಿಗೆ ಸ್ಪಂದನೆ ದೊರೆತಿಲ್ಲ. ನೀವಾದರೂ ಶಾಶ್ವತ ಪರಿಹಾರ ಒದಗಿಸಿಕೊಡಿ ಎಂದು ಕೈಮುಗಿದು ವಿನಂತಿಸಿಕೊಂಡರು.

ಜಿಲ್ಲಾಧಿಕಾರಿ ಎಪಿಎಂಸಿ ಗೋದಾಮಿನಲ್ಲಿಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ತಹಸೀಲ್ದಾರ್ ಡಾ.ಎಂ.ಬಿ.ಅಶ್ವತ್ಥ, ಪೌರಾಯುಕ್ತ ಐ.ಬಸವರಾಜ್, ಎಇ ಹಮೀದ್, ಕಂದಾಯ ಇಲಾಖೆಯ ಸಮೀರ್, ದೇವರಾಜ್, ಮಲ್ಲಿಕಾರ್ಜುನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net