ಭರತನಾಟ್ಯ ಅತ್ಯಂತ ಪ್ರಾಚೀನ ಕಲೆ

Harihara, Bharatanatyam, Rangapravesha,
Published on

ಹರಿಹರ: ಭರತನಾಟ್ಯ ಅತ್ಯಂತ ಪ್ರಾಚೀನ ಕಲೆ. ಇದು ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಕರ್ನಾಟಕ ಕಲಾಶ್ರೀ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಮಾತೆ ಸುಜಾತಾ ಗೋಪಾಲ್ ಹೇಳಿದರು.

ನಗರದ ಮರಿಯಾ ಸದನದಲ್ಲಿ ಈಚೆಗೆ ಸಂಕರ್ಷಣ ನೃತ್ಯಾಲಯದಿಂದ ಹಮ್ಮಿಕೊಂಡಿದ್ದ ಆಶ್ರಿತಾ ನಾಗರಾಜ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಭರತನಾಟ್ಯವು ಮನೋರಂಜನೆಗೆ ಮಾತ್ರ ಸೀಮಿತವಾಗದೆ, ಆತ್ಮರಂಜನೀಯ ಕಲೆಯಾಗಿ ಭಾರತದ ಪರಂಪರೆಯ ನೃತ್ಯ ಪದ್ಧತಿಯ ಕಲೆಯಾಗಿ ರೂಪುಗೊಂಡಿದೆ ಎಂದರು.

ಕು. ಆಶ್ರಿತಾ ಅಂದಾಜು ಎರಡು ತಾಸುವರೆಗೆ ಭರತನಾಟ್ಯ ಪ್ರದರ್ಶನ ನೀಡಿದರು. ಗಾಯನವನ್ನು ಬೆಂಗಳೂರಿನ ವಿದುಷಿ ವಿಭಾಶ್ರೀ ಸಿಂಹ, ಮೈಸೂರಿನ ಪಿ.ಎಸ್. ಶ್ರೀಧರ್ ಕೊಳಲುವಾದನ, ಮೈಸೂರಿನ ಸಮೃದ್ಧ ಶ್ರೀನಿವಾಸ್, ಬೆಂಗಳೂರಿನ ಎಚ್.ಎಸ್. ಕೇಶವಪ್ರಸಾದ್ ಪಿಟೀಲು ನುಡಿಸಿದರು.

ಎಂ.ಕೆ.ಇ.ಟಿ. ಶಾಲೆಯ ರಿಜಿಸ್ಟ್ರಾರ್ ಡಾ.ಬಿ.ಟಿ. ಅಚ್ಯುತ್, ಡಾ.ಆರ್.ಆರ್. ಖಮಿತ್ಕರ್, ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ, ತಪೋವನ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ವಿ.ಎಂ. ಶಶಿಕುಮಾರ್ ಮೆಹರ‌್ವಾಡೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಶ್ರೀದೇವಿ, ಸುಮನ್ ಖಮಿತ್ಕರ್, ಸಂಕರ್ಷಣ ನೃತ್ಯಾಲಯ ಸಂಸ್ಥೆಯ ಅಧ್ಯಕ್ಷೆ ವಿದುಷಿ ರಾಧಾ ಭಾಸ್ಕರ್, ನಾಗರಾಜ್ ಮತ್ತು ಅನಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net