

ದಾವಣಗೆರೆ: ಹರಿಹರ ತಾಲೂಕಿನ ಹರಳಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಶನಿವಾರ ಗ್ರಾಮದ ಗ್ರಾಮ ಪಂಚಾಯಿತಿ ಮತ್ತು ಗ್ರಂಥಾಲಯಕ್ಕೆ ಸ್ವತಃ ಭೇಟಿ ನೀಡಿ ಅದರ ಕಾರ್ಯ ವೈಖರಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದು ಬ್ಯಾಗ್ ರಹಿತ ದಿನದ ಸಂಭ್ರಮ ಸಾರ್ಥಕಪಡಿಸಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಂತಪ್ಪ ಹಾಗೂ ದ್ವಿತೀಯ ದರ್ಜೆ ಸಹಾಯಕ ರೇವಣಸಿದ್ದಪ್ಪ ಅವರು ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆ, ಆಡಳಿತ ನಿರ್ವಹಣೆ ಬಗ್ಗೆ ಮಕ್ಕಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು.
ನಂತರ ಹರಳಹಳ್ಳಿ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಭೇಟಿಕೊಟ್ಟ ಮಕ್ಕಳು ಗ್ರಂಥಪಾಲಕ ನಿಂಗಪ್ಪ ಅವರಿಂದ ಗ್ರಂಥಾಲಯದ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ, ಶಿಕ್ಷಕರು ಮತ್ತಿತರರಿದ್ದರು.