ನಿವೃತ್ತ ಯೋಧನಿಗೆ ಸ್ವಾಗತ

HRR YODHA . 3
Published on

ಹರಿಹರ: ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಶನಿವಾರ ನಗರಕ್ಕೆ ಆಗಮಿಸಿದ ನಿವೃತ್ತ ಪ್ರಕಾಶ್.ಟಿ.ಲಮಾಣಿ ಅವರಿಗೆ ಗೆಳೆಯರ ಬಳಗದ ಸದಸ್ಯರು ಮತ್ತು ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.

ಹಳೇ ಹರ್ಲಾಪುರ ಬಡಾವಣೆ ವಾಸಿ ಪ್ರಕಾಶ್ ಅವರು 2003ರಲ್ಲಿ ಸೇನೆಗೆ ಆಯ್ಕೆಯಾಗಿದ್ದರು. ಒಂದು ವರ್ಷ ಹೈದರಾಬಾದ್‌ನಲ್ಲಿ ತರಬೇತಿ ಪಡೆದು ಅಸ್ಸಾಂ, ಪಂಜಾಬ್,ನಾಸಿಕ್, ನಾಗಲ್ಯಾಂಡ್ ಹಾಗೂ ಲಡಾಕ್ ಪ್ರದೇಶಗಳಲ್ಲಿ 15 ವರ್ಷ ಸೇವೆ ಸಲ್ಲಿಸಿ ಸೆಪ್ಟೆಂಬರ್‌ನಲ್ಲಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತ ಸೈನಿಕನನ್ನು ಅಲಂಕೃತ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಾಸಕ ಎಸ್. ರಾಮಪ್ಪ ಅಭಿನಂದಿಸಿದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರವಿ ರಾಯ್ಕರ್, ರಾಘವೇಂದ್ರ ಉಪಾಧ್ಯಾಯ, ತುಳಜಪ್ಪ ಭೂತೆ, ಇಂದ್ರಜಿತ್ ಹಾಗೂ ನಿವೃತ್ತ ಯೋಧನ ಕುಟುಂಬದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net