

ಹರಿಹರ: ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದ 315 ಸರ್ಕಾರಿ ನೌಕರರಿಂದ ಒಟ್ಟು 13 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ಇಲಾಖೆ ಶಿರಸ್ತೇದಾರ್ ರಮೇಶ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಕ್ರಮವಾಗಿ ಕಾರ್ಡ್ ಹೊಂದಿದ ನೌಕರರನ್ನು ಗುರುತಿಸಿ ಪ್ರತಿ ಕೆಜಿ ಅಕ್ಕಿಗೆ 23.87 ರೂ. ನಂತೆ ಅವರಿಗೆ ವಿತರಿಸಿದ್ದ ಧಾನ್ಯಗಳ ಮೊತ್ತ 13 ಲಕ್ಷ ರೂ. ವಸೂಲಿ ಮಾಡಲಾಗಿದೆ. ಜತೆಗೆ ದಂಡ ಪಾವತಿಸದ 17 ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಎಸ್.ರಾಮಪ್ಪ, ಜಿಪಂ ಮುಖ್ಯಲೆಕ್ಕಾಧಿಕಾರಿ ಸೌಮ್ಯಶ್ರೀ , ಪಶುಸಂಗೋಪನೆ ಇಲಾಖೆ ಡಿಡಿ ಸಿದ್ದೇಶ್ ಉಪ ತಹಸೀಲ್ದಾರ್ ಶಶಿಧರಯ್ಯ, ಟಿಎಚ್‌ಒ ಚಂದ್ರಮೋಹನ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಜಿ.ಪಿ.ರೇಖಾ, ಬಿಸಿಎಂ ಸಹಾಯಕ ನಿರ್ದೇಶಕಿ ಪರ್ವಿನ್ ಬಾನು ಇತರ ಇಲಾಖೆ ಅಧಿಕಾರಿಗಳು ಇದ್ದರು.