ಹರಿಹರ ಸಾಹಿತ್ಯ ಸಮ್ಮೇಳನ 24ರಂದು

Hrr Kasapa 15 (MANJUNATHAYYA)
Published on

ಹರಿಹರ: ತಾಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಮಾ. 24 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸದಸ್ಯರ ಸಭೆಯ ತೀರ್ಮಾನದಂತೆ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಷಣ್ಮುಖಪ್ಪ ಕಮಲಾಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹರಿಹರ ಹಾಗೂ ರಾಣೇಬೆನ್ನೂರಿನ ಸಾಹಿತ್ಯಾಸಕ್ತರಿಗೆ ಅನುಕೂಲವಾಗಲೆಂದು ತಾಲೂಕಿನ ಗಡಿ ಪ್ರದೇಶವಾದ ಉಕ್ಕಡಗಾತ್ರಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಕಸಾಪ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ತಾಲೂಕು ಕಾರ್ಯದರ್ಶಿಗಳಾದ ರೇವಣನಾಯ್ಕ, ಚಿದಾನಂದ ಕಂಚೀಕೆರೆ, ನೌಕರರ ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ವಿಜಯ ಮಹಾಂತೇಶ್, ಶ್ರೀಧರಮಯ್ಯ, ಎಂ.ಉಮ್ಮಣ್ಣ, ಸದಾನಂದ, ನಾಗರಾಜ ಗೌಡ, ಎನ್.ಇ. ಸುರೇಶ್ ಸ್ವಾಮಿ, ದಂಡಿ ತಿಪ್ಪೇಸ್ವಾಮಿ, ಸಲಾಂ ಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net