ಬೈಕ್ ​ಗಳ ಕರ್ಕಶ ಸೈಲೆನ್ಸರ್, ಹೈಬೀಮ್ ಲೈಟ್​ಗಳ ನಾಶ

07 HRR
Published on

ಹರಿಹರ: ಬೈಕ್​ಗಳಿಗೆ ಅಳವಡಿಸಿದ್ದ ಕರ್ಕಶ ಶಬ್ದದ ಸೈಲೆನ್ಸರ್ ಹಾಗೂ ಹೈಬೀಮ್ ಲೈಟ್​ಗಳನ್ನು ನಗರ ಠಾಣೆ ಪೊಲೀಸರು ಬುಧವಾರ ವಶಪಡಿಸಿಕೊಂಡು ರೋಡ್ ರೋಲರ್ ಮೂಲಕ ನಾಶಪಡಿಸಿದರು.

ಕೆಲವು ಬೈಕ್ ಸವಾರರು ಕರ್ಕಶ ಶಬ್ದ ಉಂಟುಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಸೈಲೆನ್ಸರ್ ಹಾಗೂ ಹೈಬೀಮ್ ಲೈಟ್

ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಠಾಣೆ ಇನ್ಸ್ ಪೆಕ್ಟರ್ ಎಸ್.ದೇವಾನಂದ್ ತಿಳಿಸಿದರು.

ಕರ್ಕಶ ಶಬ್ದವು ವಾಹನ ಸವಾರರು ಹಾಗೂ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದರಿಂದ ರೋಗಿಗಳು, ಮಕ್ಕಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಯಾರಾದರು ಅವುಗಳನ್ನು ಬಳಸಿದರೆ ವಶಪಡಿಸಿಕೊಂಡು ದಂಡ ಹಾಕುವ ಜತೆಗೆ ದಾವೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಎಎಸ್​ಐ ಮನ್ಸೂರ್ ಅಹಮದ್, ಸಿಬ್ಬಂದಿಗಳಾದ ರವಿ ಕೃಷ್ಣಪ್ಪ, ರಂಗರೆಡ್ಡಿ, ಹನುಮಂತಪ್ಪ ಗೋಪನಾಳ, ಚಾಲಕ ರಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net