ಶಾಲಾ ನಾಯಕನಾಗಿ ಹರಿದಾಸ್ ಆರ್. ಮಲ್ಯ ಆಯ್ಕೆ

gan (14)
Published on

ಕುಂದಾಪುರ: ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ವಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಪರಿಕಲ್ಪನೆ ಮತ್ತು ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ 2025-26ನೇ ಸಾಲಿನ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಸಾರ್ವತ್ರಿಕ ಚುನಾವಣೆ ಅರಿವು ಮೂಡಿಸುವ ಸಲುವಾಗಿ ಚುನಾವಣೆಯನ್ನು ಇವಿಎಂ ಆಪ್ ಮೂಲಕ ನಡೆಸಲಾಯಿತು. ನಾಯಕನಾಗಿ ಹರಿದಾಸ್ ಆರ್.ಮಲ್ಯ 215 ಮತಗಳಿಂದ ಮತ್ತು ಉಪನಾಯಕಿಯಾಗಿ ಪ್ರಣತಿ 314 ಮತಗಳಿಂದ ಆಯ್ಕೆಯಾದರು. ಆಯ್ಕೆಯಾದ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕಿಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net