

ಉಡುಪಿ: ಕು.ಶಿ ಹರಿದಾಸ್ ಭಟ್ ವಿದ್ವತ್ಗೆ ಹೋಲಿಸಿದರೆ ಸಮಾನಂತರ ಗೌರವ ಲಭಿಸಿಲ್ಲ ಎಂಬ ಕೊರಗು ಇದೆ. ಕುಶಿಯವರು ಜಗತ್ತಿನ ವಿಷಯಗಳಲ್ಲಿ ಕರಾವಳಿಯ ಸಂಪರ್ಕಗಳನ್ನು ಶೋಧಿಸುತ್ತಿದ್ದರು. ಅವರ ಲೋಕಾಭಿರಾಮ ಸಂಪುಟದ ಆಯ್ದ ಲೇಖನಗಳ ಸಂಪುಟ ಬಿಡುಗಡೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಮಾಹೆ ವತಿಯಿಂದ ಆಶಾ ಕುತ್ಯಾರ್ ಹಾಗೂ ಅಶೋಕ್ ಕುತ್ಯಾರ್ ಪ್ರಾಯೋಜಿತ ಪ್ರೊ. ಕು.ಶಿ ಹರಿದಾಸ ಭಟ್ಟರ ಸ್ಮರಣಾರ್ಥ ನೀಡಲಾಗುವ ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿಯನ್ನು ಮೈಸೂರಿನ ಡಾ. ಡಿ.ಕೆ. ರಾಜೇಂದ್ರ ಹಾಗೂ ಬೆಂಗಳೂರಿನ ಡಾ. ವಿಜಯಶ್ರೀ ಸಬರದ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಜಗತ್ತು ಶಾಂತಿಯ ಬದಲು ಸಂರ್ಷದ ಕಡೆಗೆ ವಾಲುತ್ತಿರುವುದು ವಿಷಾದನೀಯ. ಪಿತೃ ಮತ್ತು ಪುನರ್ಜನ್ಮದ ಕಲ್ಪನೇ ಇಲ್ಲದ ಅನೇಕ ಸಮುದಾಯಗಳಿದ್ದು, ಇವೆಲ್ಲವನ್ನೂ ಭಾರತೀಯ ಸಂಪ್ರದಾಯ ಎಂಬ ಒಂದೇ ತಕ್ಕಟಿಯಲ್ಲಿ ತೂಗುವುದು ಸರಿಯಲ್ಲ ಎಂದರು.
ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಲಹಾಸಮಿತಿ ಅಧ್ಯಕ್ಷ ಡಾ.ಬಿ.ಎ ವಿವೇಕ ರೈ, ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಉಪಸ್ಥಿತರಿರುವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ. ಎನ್. ಕೆ. ಲೋಲಾಕ್ಷಿ ಅಭಿನಂದನಾ ಭಾಷಣ ಮಾಡಿದರು. ರಾವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.