ಹರೇಕಳ ಇಸ್ಪೀಟ್ ಅಡ್ಡೆಗೆ ದಾಳಿ ಮೂವರ ಬಂಧನ

mng--16 Dec harekala
Published on

ಮಂಗಳೂರು: ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿ ಶನಿವಾರ ಇಸ್ಪೀಟ್ ಆಟ ಆಡುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.


ಅಂಬ್ಲಮೊಗರು ಗಟ್ಟಿಕುದ್ರು ನಿವಾಸಿ ಅನಿಲ್ ಡಿಸೋಜಾ(45), ಉಳ್ಳಾಲ ಕೋಡಿ ಡೌನ್ ರಸ್ತೆ ಹನೀಫ್ ಮಹಮ್ಮದ್(32), ಜಪ್ಪಿನಮೊಗರು ನಿವಾಸಿ ಮಹಮ್ಮದ್ ನಾಜೀಮ್ (20) ಬಂಧಿತರು. ಠಾಣಾ ಪಿಎಸ್‌ಐ ಅಶೋಕ್ ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಆರೋಪಿಗಳ ವಶದಲ್ಲಿದ್ದ 6 ಪ್ಯಾಕೇಟ್ ಇಸ್ಪೀಟ್ ಎಲೆಗಳು, 6750 ರೂ., ನೆಲಕ್ಕೆ ಹಾಸಿದ ಟರ್ಪಾಲ್, ಮೋಬೈಲ್ ಪೋನ್ ಮತ್ತು ಒಂದು ಸ್ಕೂಟರ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅವುಗಳ ಅಂದಾಜು ಮೌಲ್ಯ ಸುಮಾರು 63750 ರೂ. ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕೊಣಾಜೆ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಎಚ್.ಎನ್, ಪೊಲೀಸ್ ಉಪ ನಿರೀಕ್ಷಕ ನಾಗರಾಜ್ ಎಸ್., ಪುನೀತ್ ಗಾಂವ್‌ಕಾರ್, ಅಶೋಕ್, ವಿನೋದ್, ಎಎಸ್‌ಐ ಸಂಜೀವ್ ಸಿಬ್ಬಂದಿಗಳಾದ, ಗಣೇಶ್, ರೇಷ್ಮಾ, ಸಂತೋಷ್ ಕೆ.ಸಿ, ಸುರೇಶ್ ತಳವಾರ್, ಪ್ರಶಾಂತ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net