ಸಂಕಷ್ಟದಲ್ಲಿ ಇರುವ ಛಾಯಾಗ್ರಾಹಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಲು ಫೋಟೋಗ್ರಾಫರ್ಸ್ ಸಂಘ ಮನವಿ

081020 Siriguppa Photographers Association Appeal
ಸಿರಗುಪ್ಪದಲ್ಲಿ ಗ್ರೇಡ್-2 ತಹಸೀಲ್ದಾರ್ ವಿಶ್ವನಾಥಗೆ ತಾಲೂಕು ವಿಡಿಯೋ ಮತ್ತು ಫೋಟೋ ವೃತ್ತಿಪರರ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಮನವಿ ಸಲ್ಲಿಸಿತು.
Published on

ಹೂವಿನಹಡಗಲಿ: ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ವಿಶ್ವಜಿತ್ ಮೆಹತಾಗೆ ತಾಲೂಕು ಛಾಯಾಗ್ರಾಹಕರ ಸಂಘ ಗುರುವಾರ ಮನವಿ ಸಲ್ಲಿಸಿತು.

ಸಂಘದ ಅಧ್ಯಕ್ಷ ಸಿದ್ದೇಶ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಆರೇಳು ತಿಂಗಳಿನಿಂದ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ದೊರೆಯುವ ಎಲ್ಲ ಸೌಲಭ್ಯ ಛಾಯಾಗ್ರಾಹಕರಿಗೆ ಒದಗಿಸಬೇಕು. ವೃತ್ತಿಪರ ಛಾಯಾಗ್ರಾಹಕರಿಗೆ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಸರ್ಕಾರಿ ಕೆಲಸಗಳಿಗೆ ಸ್ಟುಡಿಯೋ, ಪಾಸ್‌ಪೋರ್ಟ್ ಪೋಟೋಗಳನ್ನು ತೆಗೆಯಲು ಸರ್ಕಾರ ವೃತ್ತಿಪರ ಛಾಯಾಗ್ರಾಹಕರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ವಿಶ್ವನಾಥ ಸಿರಸಂಗಿ, ಉಪಾಧ್ಯಕ್ಷ ಬಸವರಾಜ್, ವೀರನಗೌಡ, ಮಲ್ಲಿಕಾರ್ಜುನ ಗೌಡ, ಶಂಕರ್ ರಾಜು ಇತರರಿದ್ದರು.

ಸಿರಗುಪ್ಪ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ವಿಡಿಯೋ ಮತ್ತು ಫೋಟೋ ವೃತ್ತಿಪರರ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಗ್ರೇಡ್-2 ತಹಸೀಲ್ದಾರ್ ವಿಶ್ವನಾಥಗೆ ಮನವಿ ಸಲ್ಲಿಸಿತು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಸದಸ್ಯರಾದ ರವಿಕುಮಾರ, ಮಲ್ಲೇಶ, ನಾಗರಾಜ, ಮಹಾದೇವ, ಆರಿಫುಲ್ಲಾ, ನೂರು ಮಹಮ್ಮದ್, ವಿಶ್ವ, ರೆಹಮಾನ್, ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net