7ನೇ ಜೈನಮುನಿಯಾಗಿ ದೀಕ್ಷೆ ಪಡೆದ ಹಾರ್ದಿಕ್; ಹೇಮಚಂದ್ರ ವಿಜಯ ಮಹರಾಜ್ ಜೀ ಎಂದು ನಾಮಕರಣ

3
Published on

ದೇವನಹಳ್ಳಿ: ಪಟ್ಟಣದ ಪಾರಿವಾಳಗುಟ್ಟದ ಸಿದ್ಧಾಚಲ ಪ್ರಭಾವಕ್ ಶಾಸನ ಸ್ಥೂಲಭದ್ರಧಾಮದ ಚಂದ್ರಯಶ್ ಸುರೀಶ್ವರ ಜೀ ಅವರಿಂದ ಗುರುವಾರ ಚಿತ್ರದುರ್ಗದ ಆಗರ್ಭ ಶ್ರೀಮಂತ ಕುಟುಂಬದ ಯುವಕ ಹಾರ್ದಿಕ್ ಕುಮಾರ್ ತಾರಾಚಂದ್ ಜೀ ಡೆಲಿಡಿಯಾ ಮೆಹ್ತಾ ದೀಕ್ಷೆ ಪಡೆದರು.

ಜೈನ ಮುನಿಗಳ ಸಮ್ಮುಖದಲ್ಲಿ ಸರ್ವಸಂಗ ಪರಿತ್ಯಾಗಿಯಾಗಿ ಬ್ರಹ್ಮಚರ್ಯದ ಸನ್ಯಾಸತ್ವ ಸ್ವೀಕರಿಸಿದರು.

ಮಧ್ಯಾಹ್ನದವರೆಗೂ ನಡೆದ ಕಾರ್ಯಕ್ರಮದ ಅಂತಿಮವಾಗಿ ಗುರುಗಳು ಹೇಮಚಂದ್ರ ವಿಜಯ ಮಹರಾಜ್ ಜೀ ಎಂದು ನಾಮಕರಣ ಮಾಡಿ ಸಿದ್ಧಾಚಲ ಸ್ಥೂಲಭದ್ರಧಾಮದ 7ನೇ ಜೈನಮುನಿಯಾಗಿ ಸೇರ್ಪಡೆ ಮಾಡಿಕೊಂಡರು.

ಹಾರ್ದಿಕ್ ತಂದೆ-ತಾಯಿ, ಕುಟುಂಬಸ್ಥರು, ದೇವನಹಳ್ಳಿಯ ಜನಪ್ರತಿನಿಧಿಗಳು, ಜೈನ ಟ್ರಸ್ಟಿಗಳು ನಾಗರಿಕರು ಸಾಕ್ಷಿಯಾದರು.

ವ್ಯಾಪಾರಿಗಳಾಗಿರುವ ತಂದೆ ತಾರಾಚಂದ್ ಮೆಹ್ತಾ ಹಾಗೂ ಮಮತಾ ಮೆಹ್ತ್ತಾ, ಪುರಸಭಾ ಸದಸ್ಯರಾದ ರೇಖಾ ವೇಣುಗೋಪಾಲ್, ಎನ್.ರಘು, ಬಿ.ಎಲ್.ಶ್ರೀಧರಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ಮೂರ್ತಿ, ಟ್ರಸ್ಟಿ ಇಂದ್ರಚಂದ್ ಬೋರಾ, ಅಭಿನಂದನ್, ನಂಜೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net