ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಹಿರಿದು

nrp poshana-1
ಎನ್.ಆರ್.ಪುರದಲ್ಲಿ ತಾಲೂಕು ಮಟ್ಟದ ಪೋಷಣ್ ಅಭಿಯಾನದ ಸಮಾರೋಪ ನಡೆಯಿತು. ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಫಾ.ಜೋಬೀಶ್, ಪ್ರಭಾಕರ್, ರಂಗಪ್ಪ, ದರ್ಶನ್, ಕಾವ್ಯಶ್ರೀ, ಕೌಶಿಕ್ ಇದ್ದರು.
Published on

ಎನ್.ಆರ್.ಪುರ: ಪೋಷಣ್ ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಹಿರಿದು. ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಹಸೀಲ್ದಾರ್ ತನುಜಾ ಟಿ. ಸವದತ್ತಿ ಹೇಳಿದರು.

ಸೋಮವಾರ ಸೋಷಿಯಲ್ ವೆಲ್ಫೇರ್ ಸೊಸೈಟಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪೋಷಣ್ ಅಭಿಯಾನದ ಸಮಾರೋಪದಲ್ಲಿ ಮಾತನಾಡಿ, ದೇಶದಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಹಮ್ಮಿಕೊಂಡಿರುವ ರಾಷ್ಟ್ರೀಯ ಪೋಷಣ್ ಅಭಿಯಾನ ಉತ್ತಮ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಸಂಯೋಜಕ ರಂಗಪ್ಪ ಮಾತನಾಡಿ, ಪೋಷಣ್ ಅಭಿಯಾನದಲ್ಲಿ ಶ್ರಮಿಸುತ್ತಿರುವ ಕಾರ್ಯಕರ್ತರ ಶ್ರಮ ಸಾರ್ಥಕವಾಗಿದೆ ಎಂದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಮಾತನಾಡಿ, 2018ರ ಮಾ.8ರಂದು ರಾಜಸ್ತಾನದ ಜುಜಾನ ಎಂಬ ಹಳ್ಳಿಯಲ್ಲಿ ಪ್ರಥಮವಾಗಿ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮಕ್ಕಳು, ಗರ್ಭಿಣಿಯರು, ಮಹಿಳೆಯರ ಅಪೌಷ್ಟಿಕತೆ ಕಡಿಮೆ ಮಾಡುವುದು, ತಾಯಿ ಮತ್ತು ಶಿಶು ಮರಣ ಶೂನ್ಯಗೊಳಿಸುವುದು ಪೋಷಣ್ ಅಭಿಯಾನದ ಉದ್ದೇಶ ಎಂದು ತಿಳಿಸಿದರು.
ಹೌಸಿಂಗ್ ಬೋರ್ಡ್, ಸಿಂಸೆ, ಅಂಬೇಡ್ಕರ್ ನಗರ ಹಾಗೂ ಎನ್.ಆರ್.ಪುರ-4 ಅಂಗನವಾಡಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸೋಷಿಯಲ್ ವೆಲ್ಫೇರ್ ಸೊಸೈಟಿ ನಿರ್ದೇಶಕ ಫಾ. ಜೋಬೀಶ್, ಪ್ರಭಾಕರ್, ಸಿಸ್ಟರ್ ಚಾರ್ಲ್ಸ್, ಓಂಕಾರಪ್ಪ, ಕಾವ್ಯಶ್ರೀ, ಕೌಶಿಕ್, ಸೆಬಾಸ್ಟಿನ್, ಪ್ರೇಂಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net