ಅಸಾಧ್ಯವನ್ನು ಸಾಧ್ಯವಾಗಿಸಲು ಶ್ರದ್ಧೆ ಮುಖ್ಯ

Hard work is key to making the impossible possible.
ಬನಹಟ್ಟಿಯ ಸಿದ್ಧಾರೂಢ ಮಠದಲ್ಲಿ ಅಕ್ಕಲಕೋಟ ರಾಜಗುರು ಕ್ರಾಂತಿಯೋಗಿ ಶ್ರೀ ರೇವಣಸಿದ್ಧ ಶಿವಶರಣರ ಚರಿತ್ರೆಯ ಪಾರಾಯಣದ ಸಮಾರೋಪ ಸಮಾರಂಭದಲ್ಲಿ ಜಮಖಂಡಿಯ ರುದ್ರಾವಧೂತ ಮಠದ ಕೃಷ್ಣಾನಂದ ಶ್ರೀಗಳು ಆಶೀರ್ವಚನ ನೀಡಿದರು.
Published on

ರಬಕವಿ/ಬನಹಟ್ಟಿ: ಮಹಾತ್ಮರ ಚರಿತ್ರೆಯನ್ನು ಶೃದ್ಧೆಯಿಂದ ಪಠಣ ಮಾಡಬೇಕು. ಶ್ರದ್ಧೆಯಿಂದ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ ಎಂದು ಜಮಖಂಡಿಯ ರುದ್ರಾವಧೂತ ಮಠದ ಕೃಷ್ಣಾನಂದ ಶ್ರೀಗಳು ಹೇಳಿದರು.

ಬನಹಟ್ಟಿಯ ಶಿವಶರಣ ಸಿದ್ಧಾರೂಢ ಮಠದಲ್ಲಿ ಅಕ್ಕಲಕೋಟ ರಾಜಗುರು ಕ್ರಾಂತಿಯೋಗಿ ಶ್ರೀ ರೇವಣಸಿದ್ಧ ಶಿವಶರಣರ ಚರಿತ್ರೆಯ ಪಾರಾಯಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಪಕಾರ ಮಾಡಿದವರಿಗೂ ಒಳಿತು ಬಯಸುವುದು ಮಹಾತ್ಮರ ಲಕ್ಷಣ. ಅವರ ಮನಸ್ಸು, ವಾಣಿ, ಕಾರ್ಯ ಒಂದೇ ಆಗಿರುತ್ತದೆ ಎಂದರು.

ಮೋಹನ ಪತ್ತಾರ ಮಾತನಾಡಿ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿ ಪ್ರವಚನಗಳನ್ನು ಆಲಿಸುವುದರಿಂದ ನಿತ್ಯದ ಬದುಕಿಗೆ ಹೊಸತನ ಸಿಕ್ಕಂತಾಗುತ್ತದೆ. ಮಹಾತ್ಮರ ವಾಣಿಗಳನ್ನು ಆಲಿಸಿರಿ ಎಂದು ಸಲಹೆ ನೀಡಿದರು.

ಮಾನಿಂಗಪ್ಪ ಶೀಲವಂತ, ಕಾಳಪ್ಪ ಪತ್ತಾರ, ರವಿ ಪತ್ತಾರ, ರಮೇಶ ಸೋರಗಾಂವಿ, ಪ್ರಕಾಶ ಬುರುಡ, ವೈ. ಬಿ. ಕೊರಡೂರ, ಕಲ್ಲಪ್ಪ ಪತ್ತಾರ, ಶಂಕರ ಹನಗಂಡಿ, ರಾಜು ಬೀಳಗಿ, ಚಿದಾನಂದ ಪತ್ತಾರ, ಶೈಲಜಾ ನುಚ್ಚಿ, ಮಹಾನಂದಾ ಕುಳ್ಳಿ, ರಜನಿ ಶೇಠೆ, ವಂದನಾ ಪತ್ತಾರ, ಗೀತಾ ಪತ್ತಾರ, ರಾಜೇಶ್ವರಿ ಬಂದಿ, ಕಮಲಾ ಬಂಗಿ, ಬಸವರಾಜ ಸುಲ್ತಾನಪೂರ, ರಾಜು ಬೀಳಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net