ಗುರಿ ಸಾಧನೆಗೆ ಶ್ರಮ ಮುಖ್ಯ

18 vikram 1
????????????????????????????????????
Published on

ಧಾರವಾಡ: ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಷಿರ್ಕ ಸ್ನೇಹ ಸಮ್ಮೇಳನ ಹಾಗೂ ದ್ವೀತಿಯ ಪಿಯು ವಿದ್ಯಾಥಿರ್ಗಳ ಬೀಳ್ಕೊಡುಗೆ ಸಮಾರಂಭವನ್ನು ಇತ್ತೀಚೆಗೆ ಜರುಗಿತು.
ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ತಜ್ಞ ಸುರೇಶ ಕುಲಕಣಿರ್ ಮಾತನಾಡಿ, ಶಿಣ ಎಂಬುದು ಕೇವಲ ಪ್ರಶ್ನೆಗಳಿಗೆ ಉತ್ತರ ಬರೆಯುವುದಲ್ಲ. ಕುತೂಹಲವೇ ಶಿಣ ಎಂಬುದನ್ನು ಮನವರಿಕೆ ಮಾಡಿದ ಅವರು, ತಾಯಿ ಮತ್ತು ತಾಯಿ ನುಡಿಯ ಮಹತ್ವ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಉಪಾಧ್ಯಕ್ಷ ವೀರಣ್ಣ ಯಳಲಿ ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ಜೀವನದಲ್ಲಿ ಇಟ್ಟುಕೊಂಡಿರುವ ಗುರಿ ಸಾಧನೆಗೆ ಸತತ ಪರಿಶ್ರಮ ಮುಖ್ಯವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸಾಧನೆಯತ್ತ ಸಾಗಬೇಕು ಎಂದರು.
ಎಸ್​.ಸಿ.ನೀಲಗುಂದ, ಡಾ.ಸವಿತಾ ಪಾಟೀಲ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು. ಪ್ರಾಚಾರ್ಯ ರಾಜೇಂದ್ರಕುಮಾರ ಮಠ ಸ್ವಾಗತಿಸಿದರು. ಸಿ.ಬಿ.ಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲತಿ ಎಂ. ಹಾಗೂ ಚನ್ನಮ್ಮ ಪಾಟೀಲ ನಿರೂಪಿಸಿದರು. ದೀಪಾ ಪಣದಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net