ಜೀವನದ ಯಶಸ್ಸಿಗೆ ಶ್ರಮದ ದುಡಿಮೆ ಅವಶ್ಯ

Hard work is essential for success in life.
ಅಂಕೋಲಾದ ಕಣಿಗಿಲ್ ಗ್ರಾಮದಲ್ಲಿ ಇತ್ತಿಚಿಗೆ ಆಯೋಜಿಸಿದ್ದ ಕೈಮಗ್ಗ ದಿನಾಚರಣೆ ಕಾರ್ಯಕ್ರಮವನ್ನು ಜವಳಿ ಇಲಾಖೆಯ ಎಡಿ ಮಂಜುನಾಥ ಉದ್ಘಾಟಿಸಿದರು. ಲಕ್ಷ್ಮೀಧರ ನಾಯಕ, ಶಶಿಕಲಾ ನಾಯಕ, ಗುರುರಾಜ ನಾಯ್ಕ, ಕಲ್ಪನಾ ನಾಯಕ, ಶೋಭಾ ನಾಯ್ಕ, ಉಮಾ, ಜ್ಯೋತಿ ಮಾನಸಾ, ಗೀತಾ, ರಾಧಾ, ನಾಗವೇಣಿ, ಸ್ವಪ್ನಾ, ಅರ್ಪಿತಾ ಇತರರಿದ್ದರು.
Published on

ಅಂಕೋಲಾ : ಪ್ರತಿಯೊಬ್ಬರೂ ಶ್ರಮಪಟ್ಟು ದುಡಿದರೆ ಜೀವನ ಯಶಸ್ವಿಯಾಗುತ್ತದೆ. ಕೈ ಮಗ್ಗ ಹಿಂದಿನ ಕಾಲದಿಂದಲೂ ಹಲವು ಜನರ ಬದುಕು ರೂಪಿಸಿದೆ. ತಾವೆಲ್ಲರೂ ಈ ಕೈ ಮಗ್ಗದಲ್ಲಿ ಕೆಲಸ ಮಾಡುವ ಮೂಲಕ ನಿಮ್ಮ ಬದುಕನ್ನು ರೂಪಿಸಿಕೊಳ್ಳಿ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಹೇಳಿದರು.

ಪ್ರಗತಿ ವನಿತಾ ಸಮಾಜದವರು ತಾಲೂಕಿನ ಕಣಿಗಿಲ್ ಕೈಮಗ್ಗದ ಕೇಂದ್ರದಲ್ಲಿ ಇತ್ತೀಚಿಗೆ ಹಮ್ಮಿಕೊಂಡ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಇಂತಹ ಗ್ರಾಮೀಣ ಪ್ರದೇಶದಲ್ಲಿ ಇತರರಿಗೆ ತರಬೇತಿಯನ್ನು ನೀಡಿ ಈ ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿರುವುದು ಶಶಿಕಲಾ ನಾಯಕ ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದರು.

ಶೆಟಗೇರಿ ಗ್ರಾಪಂ ಅಧ್ಯಕ್ಷ ಲಕ್ಷ್ಮೀಧರ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಉದ್ಯೋಗಾವಕಾಶದ ಕೊರತೆ ಇತ್ತು. ಆದರೆ ನಾನು ಸಾಧನೆ ಮಾಡುತ್ತೇನೆ ಎಂದು ಹೊರಟರೆ, ಇಂದು ಸಾಕಷ್ಟು ಕೆಲಸಗಳಿವೆ. ಯಾವುದೇ ಕೆಲಸವು ದೊಡ್ಡದಲ್ಲ ಯಾವುದೇ ಕೆಲಸವು ಚಿಕ್ಕದಲ್ಲ. ಎಲ್ಲ ಕೆಲಸಗಳನ್ನು ಸರಿ ಸಮಾನವಾಗಿ ಕಂಡು ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಾದ ಜವಾಬ್ದಾರಿ ನಮ್ಮದು ಎಂದರು.

ಕಾರ್ಯಕ್ರಮದ ರೂವಾರಿ ಶಶಿಕಲಾ ನಾಯಕ ಮಾತನಾಡಿ, ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ ಆತ್ಮ ತೃಪ್ತಿ ಇದೆ. ಇಂದು ಕೈಮಗ್ಗ ದಿನಾಚರಣೆ, ನಮ್ಮ ಓಣಿ ನೇಕಾರರ ಓಣಿಯಾಗಬೇಕೆನ್ನುವುದು ನನ್ನ ಆಶಯ. ಈ ನಿಟ್ಟಿನಲ್ಲಿ ಇಲ್ಲಿಯ ಸುತ್ತಮುತ್ತಲಿನ ಮಹಿಳೆಯರು ಶ್ರಮಿಸಿದರೆ ಎಲ್ಲವೂ ಸಾಧ್ಯ. ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕ ಗುರುರಾಜ ನಾಯ್ಕ ಮಾತನಾಡಿದರು.

ಕಲ್ಪನಾ ನಾಯಕ, ಶೋಭಾ ನಾಯ್ಕ, ಉಮಾ, ಜ್ಯೋತಿ ಮಾನಸಾ, ಗೀತಾ, ರಾಧಾ, ನಾಗವೇಣಿ, ಸ್ವಪ್ನಾ, ಅರ್ಪಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net