ಸಹಕಾರಿ ಸಂಘದ ಬೆಳವಣಿಗೆ ಹಿಂದೆ ಶ್ರಮವಿದೆ

16 ckm 1
ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ೨೦೨೩-೨೪ ನೇ ಸಾಲಿನ ಸರ್ವಸದಸ್ಯರ ಸಭೆ ಹಾಗೂ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟಿಸಿದರು. ಬಿ.ಎಸ್.ಪ್ರಶಾಂತ್, ಬಿ.ಎನ್.ರಾಜಣ್ಣ ಶೆಟ್ಟಿ, ಎಂ.ಮಲ್ಲೇಶ್, ಸಿ.ವಿ.ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸಹಕಾರ ಸಂಘವನ್ನು ಸ್ಥಾಪಿಸುವುದು ಸುಲಭ. ಬೆಳವಣಿಗೆಯತ್ತ ಕೊಂಡೊಯ್ಯಲು ಬಹಳಷ್ಟು ಶ್ರಮ ಬೇಕು. ಆ ಸಾಲಿನಲ್ಲಿ ಟೌನ್ ಕೋ ಆಪರೇಟಿವ್ ಸೊಸೈಟಿ ಶತಮಾನೋತ್ಸವ ಪೂರೈಸಿ ಪ್ರಗತಿಯತ್ತ ಮುನ್ನೆಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದ ಎಂ.ಜಿ.ರಸ್ತೆ ಸಮೀಪದ ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ೨೦೨೩-೨೪ ನೇ ಸಾಲಿನ ಸರ್ವಸದಸ್ಯರ ಸಭೆ ಹಾಗೂ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ತತ್ವ ಪ್ರಕೃತಿಯಲ್ಲಿ ಅಡಗಿದೆ. ನೀರು ಆವಿಯಾಗಿ, ಮೋಡದ ಮೂಲಕ ಮಳೆಯಾಗುತ್ತದೆ. ಆ ಮಳೆ ನೀರನ್ನು ಉಪಯೋಗಿಸಿ ಹಸಿರು ಚಿಗುರೊಡೆಯುತ್ತದೆ. ಅದರಂತೆ ಪಂಚಭೂತಗಳು ಕೂಡಾ ಒಂದೊಕ್ಕೊAದು ಸಹಕಾರಿ ತತ್ವದಲ್ಲಿ ಪೂರಕವಾಗಿ ಕೆಲಸ ನಿರ್ವಹಿಸುತ್ತವೆ. ಸಹಕಾರ ಎಂಬುದು ದೈವ ನಿಯಮ ಎಂದರು.
ಮನುಷ್ಯ ಧರಿಸುವ ಬಟ್ಟೆ, ಸೇವಿಸುವ ಆಹಾರ ಮೂಲತಃ ಎಲ್ಲಿಂದ ಬಂತು ತಿಳಿದಿಲ್ಲ. ಅದೇ ಎಲ್ಲವೂ ಕೂಡಾ ಒಬ್ಬರಿಗೊಬ್ಬರು ಪೂರಕ ಎಂಬುದು ತೋರಿಸುತ್ತದೆ. ಸಹಕಾರಿ ಚಳವಳಿ ಪರಸ್ಪರ ಒಟ್ಟಾಗಿ ಪ್ರಗತಿಗೆ ಪೂರಕ. ಸಹಕಾರದಿಂದ ಪರಸ್ಪರ ಒಟ್ಟುಗೂಡಿಸಿದರೆ ಅಸಾಧ್ಯವಾದನ್ನು ಸಾಧ್ಯವಾಗಿಸಲು ಪ್ರೇರಣೆ ಸಿಗುತ್ತದೆ ಎಂದು ಹೇಳಿದರು.
ಹಗರಣವೇ ಸದ್ದು ಮಾಡುತ್ತಿರುವ ಕಾಲದಲ್ಲಿ ೧೧೫ ವರ್ಷಗಳಿಂದ ಹಗರಣಕ್ಕೆ ಆಸ್ಪದವಿಲ್ಲದೇ ಒಂದು ಸಹಕಾರ ಸಂಘ ಬೆಳೆದಿರುವುದು ಸಾಮಾನ್ಯದ ಸಂಗತಿಯಲ್ಲ. ಇದೀಗ ನೂತನ ಕಟ್ಟಡ ಸ್ಥಾಪಿಸುವ ಮೂಲಕ ವರ್ಷಕ್ಕೆ ಸುಮಾರು ೩೦ ಲಕ್ಷ ಆದಾಯ ಗಳಿಸಲು ಆಡಳಿತ ಮಂಡಳಿ, ಸಿಬ್ಬಂದಿವರ್ಗ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸೊಸೈಟಿ ನಿರ್ದೇಶಕ ಬಿ.ಎಸ್.ಪ್ರಶಾಂತ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸೊಸೈಟಿ ಹಿರಿಯರ ಸಹಕಾರದಿಂದ ಬೃಹತ್ ಮಟ್ಟದ ಕಟ್ಟಡವನ್ನು ಪೂರ್ಣಗೊಳಿಸಿ ಸಂಘವನ್ನು ಬೆಳವಣಿಗೆಯತ್ತ ಕೊಂಡೊಯ್ಯಲು ಆಡಳಿತ ಮಂಡಳಿ ನಿರಂತರಾಗಿರುವುದು ಖುಷಿ ತಂದಿದೆ. ಅದರಂತೆ ಮುಂಬರುವ ದಿನಗಳಲ್ಲಿ ಸದಸ್ಯರು, ಷೇರುದಾರರಿಗೆ ಆರ್ಥಿಕ ಸವಲತ್ತು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎನ್.ರಾಜಣ್ಣಶೆಟ್ಟಿ, ಈಗಾಗಲೇ ಸಂಘದ ೯ ಮಳಿಗೆಗಳಿಂದ ಪ್ರತಿ ತಿಂಗಳು ೧.೯೩ ಲಕ್ಷ ಬಾಡಿಗೆ ಹಾಗೂ ಇದೀಗ ೧.೬೪ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ೪ ಮಳಿಗೆಯಿಂದ ೮೦ ಸಾವಿರ ಬಾಡಿಗೆಯಿದೆ. ಎರಡು ಕಟ್ಟಡದಿಂದ ಒಟ್ಟಾರೆ ೨.೭೩ ಲಕ್ಷ ರೂ. ಬಾಡಿಗೆ ಬರುತ್ತಿದ್ದು ಮುಂದೆ ಸಂಘದ ಸದಸ್ಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಮಲ್ಲೇಶ್, ನಿರ್ದೇಶಕರಾದ ಸಿ.ವಿ.ಕುಮಾರ್, ಎಂ.ಶ್ರೀನಿವಾಸ್, ಸಿ.ಆರ್.ಕೇಶವಮೂರ್ತಿ, ಸಿ.ಆರ್.ಗಂಗಾಧರ್, ಬಿ.ಎಸ್.ಪ್ರಶಾಂತ್, ವರಸಿದ್ದಿ ವೇಣುಗೋಪಾಲ್, ಅಂಬಿಕಾ, ಜಯಂತಿ, ಕಾರ್ಯದರ್ಶಿ ಗಾಯತ್ರಿ, ಮುಖಂಡರಾದ ಪ್ರೇಮ್‌ಕುಮಾರ್, ಮುಗುಳುವಳ್ಳಿ ನಿರಂಜನ್, ನಾರಾಯಣ್, ವಿರೂಪಾಕ್ಷ, ಷಣ್ಮುಗ, ಪ್ರೇಮ್‌ಕುಮಾರ್, ಶಶಿಪ್ರಸಾದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net