ಕಠಿಣ ಪರಿಶ್ರಮದಿಂದ ಅಧ್ಯಯನ ಕೈಗೊಳ್ಳಲಿ

web4
ಹಾರೂಗೇರಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಸತ್ಕರಿಸಲಾಯಿತು. ಎನ್.ಎಸ್.ಚೌಗಲಾ, ಎಂ.ಎನ್.ಚೌಗಲಾ, ಜಿನ್ನಪ್ಪ ಅಸ್ಕಿ, ಡಾ.ಆರ್.ಬಿ.ಒಡೆಯರ ಇತರರಿದ್ದರು.
Published on

ಹಾರೂಗೇರಿ: ಕಠಿಣ ಪರಿಶ್ರಮದಿಂದ ಅಧ್ಯಯನ ಕೈಗೊಳ್ಳಬೇಕು ಎಂದು ಜನಪದ ಸಾಹಿತಿ ಶ್ರೀಕಾಂತ ಕೆಂಧೂಳಿ ಹೇಳಿದರು.

ಪಟ್ಟಣದ ಡಾ.ರಾಮ ಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ ಆವರಣದಲ್ಲಿ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿದರು. ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಗಸ್ತಿ ಹಾಗೂ ನೇತ್ರ ತಜ್ಞ ಡಾ.ಆರ್.ಬಿ.ವಡೆಯರ ಅವರಿಗೆ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷ ಎನ್.ಎಸ್.ಚೌಗಲಾ, ಪಿಕೆಪಿಎಸ್ ಅಧ್ಯಕ್ಷ ಜಿನ್ನಪ್ಪ ಅಸ್ಕಿ, ಶಿವರಾಜ ಬಾಗೇವಾಡಿ, ಅಪ್ಪಾಸಾಬ ಜಮಾದಾರ, ಮುದುಕಪ್ಪ ಠಕ್ಕಣ್ಣವರ, ಪುರಸಭೆ ಸದಸ್ಯ ಬಸವರಾಜ ಚೌಗಲಾ, ಆಡತಾಧಿಕಾರಿ ಎಂ.ಎನ್.ಚೌಗಲಾ, ರಾಧಿಕಾ ಪತ್ತಾರ, ಸದಾಶಿವ ಹಳಿಂಗಳಿ, ಶಂಕರ ಹೆಗಡೆ, ವಿ.ಡಿ.ಧರ್ಮಟ್ಟಿ, ಪ್ರಾಚಾರ್ಯ ವೈ.ಬಿ.ಪಾಟೀಲ, ವಿ.ಎನ್.ಸರಿಕರ, ವಿ.ಪಿ.ಹಳ್ಳೂರ, ಎಸ್.ಜಿ.ರಾಯಬಾಗಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net