ಮಹಿಳೆಗೆ ಕಿರುಕುಳ ಆರೋಪ, ದೂರು

Published on

ಮೈಸೂರು: ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಪಾಲುದಾರ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆಯೊಬ್ಬರು ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸರಸ್ವತಿಪುರಂನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ನನ್ನ ಪತಿ ಚಂದು, ವಿನಯ್ ಪಾಲುದಾರರಾಗಿದ್ದರು. ಬೋಗಾದಿ ಮನೆಯಲ್ಲಿ ನನ್ನನ್ನು ಇರಿಸಿಕೊಂಡಿದ್ದ ವಿನಯ್, ಕೆಲ ದಿನಗಳ ಹಿಂದೆ ಬಂದು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದ. ಈ ಬಗ್ಗೆ ಪತಿ ಚಂದು ಗಲಾಟೆ ಮಾಡಿದಾಗ ವಿನಯ್ ಅವರ ಪತ್ನಿ ಮಮತಾ, ಕಾರಿನ ಚಾಲಕ ರಘು, ಚೆಂಗಪ್ಪ ಅವರು ಬಂದು ನನಗೆ ಬೆದರಿಕೆ ಹಾಕಿದ್ದರು. ಅಲ್ಲದೆ ಖಾಲಿ ಪತ್ರಕ್ಕೆ ಸಹಿ ಮಾಡುವಂತೆ ಬಲವಂತ ಮಾಡಿದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net