

ಗೋಕಾಕ: ಗಂಡನ ಮನೆಯವರ ಕಿರುಕುಳ ತಾಳಲಾರದೇ ಮಹಿಳೆಯೋರ್ವಳು ನೇಣಿಗೆ ಶರಣಾದ ಘಟನೆ ಬುಧವಾರ ಸಂಜೆ ನಗರದಲ್ಲಿ ನಡೆದಿದೆ. ಇಲ್ಲಿಯ ಆದಿತ್ಯ ನಗರದ ನಿವಾಸಿ ದೀಪಾ ದೀಪಕ ನ್ಯಾಮಗೌಡರ (21) ಮೃತ ಮಹಿಳೆ.
ಪತಿ ದೀಪಕ ಅಲ್ಲಪ್ಪ ನ್ಯಾಮಗೌಡರ ಹಾಗೂ ಕುಟುಂಬಸ್ಥರು ಕಿರುಕುಳ ನೀಡಿದ್ದರು ಎಂದು ಮೃತಳ ತಂದೆ ಧಾರವಾಡದ ನಿವಾಸಿ ರಾಜಶೇಖರ ಯಂಡಿಗೇರಿ ದೂರಿನಲ್ಲಿ ತಿಳಿಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.