

ಹರಪನಹಳ್ಳಿ: ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಡಿ.26 ರಂದು ತಾಲೂಕು ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಾಪಂ ಇಒ ವೈ.ಎಚ್.ಚಂದ್ರಶೇಖರ ತಿಳಿಸಿದ್ದಾರೆ.
ತಾಲೂಕು ಆಡಳಿತ, ತಾಪಂ ಹಾಗೂ ತಾಲೂಕು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಅಯೋಜಿಸಿದ್ದು ತಾಲೂಕಿನಲ್ಲಿರುವ ಆಸಕ್ತ ಅಂಗವಿಕಲರು ಭಾಗವಹಿಸಬಹುದು. ಅಂಗವಿಕಲರಿಗೆ ಊರು ಗೋಲು ಓಟ, ಗುಂಡು ಎಸೆತ, ವಿಲ್ ಚೇರ್ ಓಟ, ದೃಷ್ಟಿ ದೋಷವುಳ್ಳವರಿಗೆ ಬಿಳಿ ಕೋಲು ಓಟ, ಗುಂಡು ಎಸೆತ. ಶ್ರವಣ ದೋಷವುಳ್ಳವರಿಗೆ ರನ್ನಿಂಗ್ ರೇಸ್, ಗುಂಡು ಎಸೆತ, ಬೌದ್ಧಿಕ ಅಂಗವಿಕಲರಿಗೆ ಚೆಂಡು ಎಸೆತ ಮ್ಯೂಸಿಕಲ್ ಚೇರ್ ಸೇರಿದಂತೆ ವಿವಿಧ ಜಾನಪದ ಸ್ಪರ್ಧೆ ಆಯೋಜನೆ ಮಾಡಲಾಗಿದೆ.
ಮಾಹಿತಿಗೆ ತಾಪಂ ಎಂಆರ್‌ಡಬ್ಲ್ಯು ಧನರಾಜ್ ಆರ್( 9901182525) ಮತ್ತು ಪುರಸಭೆಯ ನಗರ ಪುನರ್ವಸತಿ ಕಾರ್ಯಕರ್ತ ಜುಂಜಪ್ಪ (9845649016) ಹಾಗೂ ಗ್ರಾ.ಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.