ಗಾಳಿ, ಮಳೆಗೆ ತೋಟಗಾರಿಕೆ ಬೆಳೆ ನಷ್ಟ

05042022 harapanahalli crop loss
Published on

ಹರಪನಹಳ್ಳಿ: ತಾಲೂಕಿನ ಕಾಯಕದಹಳ್ಳಿ ಗ್ರಾಮ ಮತ್ತು ಸುತ್ತಲಿನ ಪ್ರದೇಶದಲ್ಲಿ ಸೋಮವಾರ ರಾತ್ರಿ ಸುರಿದ ಮಳೆ, ಬೀಸಿದ ಬಿರುಗಾಳಿಗೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಒಂದು ಮನೆ ಭಾಗಶಃ ಜಖಂ ಗೊಂಡು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿನ ಮರಗಳು ಉರುಳಿವೆ. ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಂ.ಬಸವರಾಜಯ್ಯ ಅವರ ತೋಟದಲ್ಲಿನ 18 ತೆಂಗಿನಗಿಡ, 20 ಲಿಂಬೆ ಗಿಡ, 18 ಅಡಕೆ, 5 ಮಾವಿನ ಗಿಡ, ತೇಗ, ಗಂಧ, ನೇರಳೆ ಮರಗಳು ಧರೆಗೆ ಉರುಳಿವೆ. ಶಂಕರನಹಳ್ಳಿ ಗ್ರಾಮದ ಆಕಳೊಂದು ಸಿಡಿಲಿಗೆ ಬಲಿಯಾಗಿದೆ. ತೋಟಗಾರಿಕೆ ಇಲಾಖಾಧಿಕಾರಿಗಳು ಹಾನಿ ಸಮೀಕ್ಷೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net