ನೂತನ ವಿಜಯನಗರ ಜಿಲ್ಲೆಗೆ ಹರಪನಹಳ್ಳಿ ಎಸಿ ಚಂದ್ರಶೇಖರಯ್ಯ ಪ್ರಭಾರ ಎಡಿಸಿ

19102021 Harapanahalli AC Chandrasekharaiah
Published on

ಹರಪನಹಳ್ಳಿ: ನೂತನ ವಿಜಯನಗರ ಜಿಲ್ಲೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಇಲ್ಲಿನ ಸಹಾಯಕ ಆಯುಕ್ತ ಎಚ್.ಜಿ.ಚಂದ್ರಶೇಖರಯ್ಯರನ್ನು ಪ್ರಭಾರ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಡಿಸಿ ಆದೇಶ ಹೊರಡಿಸಿದ್ದಾರೆ.

ಈ ಮೊದಲು ತುಮಕೂರು ಜಿಲ್ಲೆ ಮಧುಗಿರಿ, ಮೈಸೂರಿನ ಹುಣಸೂರು ಹಾಗೂ ಬೆಳಗಾವಿ ಜಿಲ್ಲೆ ಚಿಕ್ಕೋಡಿ, ಪ್ರಸ್ತುತ ಹರಪನಹಳ್ಳಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಚಂದ್ರಶೇಖರಯ್ಯ ಕರ್ತವ್ಯ ನಿರ್ವಹಿಸಿದ್ದಾರೆ. ‘ಜಿಲ್ಲೆಯ ಮೊದಲ ಅಪರ ಜಿಲ್ಲಾದಿಕಾರಿಯಾಗಿ ಪ್ರಭಾರ ವಹಿಸಿಕೊಳ್ಳುತ್ತಿರುವುದಕ್ಕೆ ಸಂತಸವಾಗಿದೆ, ಹೊಸ ಜಿಲ್ಲೆ ಆರಂಭವಾಗಿರುವುದರಿಂದ ಜಿಲ್ಲೆಯ ಪರಿಪೂರ್ಣ ಕಾರ್ಯಗಳಿಗೆ ಅತ್ಯಂತ ಪ್ರಾಮಾಣಿಕತೆಯಿಂದ ಸಾರ್ವಜನಿಕರ ಸಹಕಾರ ಪಡೆದು, ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗುವೆ’ ಎನ್ನುತ್ತಾರೆ ಚಂದ್ರಶೇಖರಯ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net