ತೆಗ್ಗಿನಮಠದಲ್ಲಿ ನಾಳೆಯಿಂದ ಪುಣ್ಯಾರಾಧನೆ, ಪಟ್ಟಾಧಿಕಾರ ಸಮಾರಂಭ

141221 TM Chandrashekharayya, Varasadyōjāta śrī
ಟಿ.ಎಂ.ಚಂದ್ರಶೇಖರಯ್ಯ ಹಾಗೂ ವರಸದ್ಯೋಜಾತ ಶ್ರೀ.
Published on

ಹರಪನಹಳ್ಳಿ: ತೆಗ್ಗಿನಮಠ ಸಂಸ್ಥಾನದ ಶ್ರೀ ಲಿಂ.ಚಂದ್ರಮೌಳೇಶ್ವರ ಶಿವಾಚಾರ್ಯರ ಏಳನೇ ವರ್ಷದ ಪುಣ್ಯಾರಾಧನೆ, ಶ್ರೀ ವರಸದೋಜ್ಯಾತ ಶಿವಾಚಾರ್ಯರ ಆರನೇ ವರ್ಷದ ಪಟ್ಟಾಧಿಕಾರದ ಸಮಾರಂಭ ಡಿ.15ರಿಂದ ಎರಡು ದಿನ ಮಠದ ಆವರಣದಲ್ಲಿ ನಡೆಯಲಿದೆ. ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಆಡಳಿತಾಧಿಕಾರಿ ಟಿ.ಎಂ.ಚಂದ್ರಶೇಖರಯ್ಯ ತಿಳಿಸಿದರು. ಪಟ್ಟಣದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶ್ರೀಮಠದಿಂದ ಆರೋಗ್ಯ ತಪಾಸಣೆ ಶಿಬಿರ, ಪದ್ಮಶ್ರೀ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ, ಶಿವದೀಕ್ಷೆ ಕಾರ್ಯಕ್ರಮಗಳು ನಡೆಯಲಿವೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಸಾಧನೆ ಮಾಡಿದವರನ್ನು ಗೌರವಿಸಲಾಗುವುದು. ಎಸ್‌ಸಿಎಸ್ ಔಷಧ ಮಹಾವಿದ್ಯಾಲಯ, ಎಸ್‌ಎಸ್‌ಐಎಂಎಸ್ ಸ್ವರ್ಶ್ ಮತ್ತು ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಡಿ.15 ರಂದು ಉಚಿತ ಕೀಲು ಮೂಳೆ ತಪಾಸಣೆ, ಹೃದಯ ರೋಗ ತಪಾಸಣೆ ಶಿಬಿರ ನಡೆಯಲಿದೆ ಎಂದರು. ಶ್ರೀ ವರಸದೋಜ್ಯಾತ ಶಿವಾಚಾರ್ಯರು, ಬಿ.ಇಡಿ ಕಾಲೇಜು ಪ್ರಾಚಾರ್ಯ ಟಿ.ಎಂ. ರಾಜಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net