ಗುತ್ತಿಗೆದಾರರ ಸಂಘಕ್ಕೆ ಉಮಾಕಾಂತ ಅಧ್ಯಕ್ಷ

hrp-1
ಹರಪನಹಳ್ಳಿ ತಾಲೂಕು ಗುತ್ತಿಗೆದಾರರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಗುತ್ತಿಗೆದಾರರಾದ ಬಾಣದ ಅಂಜಿನಪ್ಪ, ಮಹಾಂತೇಶನಾಯ್ಕ, ಟಿ.ಅಂಜಿನಪ್ಪ, ಛಲವಾದಿ ಪರಶುರಾಮ, ನಾಗರಾಜ ನಾಯ್ಕ, ಪ್ರವೀಣಕುಮಾರ, ಅರುಣಕಮಾರ ಉಮೇಶನಾಯ್ಕ, ನೂರ‌್ಯಾನಾಯ್ಕಾ, ಚಂದ್ರನಾಯ್ಕ್ಕ, ಭೋವಿ ಬಸವರಾಜ ಇನ್ನಿತರರಿದ್ದರು.
Published on

ಹರಪನಹಳ್ಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಗುತ್ತಿಗೆದಾರರ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ತೆಲಗಿ ಉಮಾಕಾಂತ, ಉಪಾಧ್ಯಕ್ಷರಾಗಿ ಎಚ್.ಎಂ.ವಿಕ್ರಮ, ಕಾರ್ಯದರ್ಶಿಯಾಗಿ ಎಚ್.ಜಯಪ್ರಕಾಶ ಅವಿರೋಧವಾಗಿ ಆಯ್ಕೆಯಾದರು.

ತೋಟಪ್ಪ ಶೆಟ್ಟಿ (ಗೌರವಾಧ್ಯಕ್ಷ), ಜಿ.ಆರ್.ರವಿನಾಯ್ಕ (ಸಹ ಕಾರ್ಯದರ್ಶಿ) ಬಿ.ಜಬಿವುಲ್ಲ (ಖಜಾಂಚಿ) ಹಾಗೂ ಸಂಘದ ನಿರ್ದೇಶಕರಾಗಿ ಹುಣಿಸಿಹಳ್ಳಿ ಮಂಜುನಾಥ, ರಾಗಿರೊಟ್ಟಿ ಜಾಕೀರ್ ಹುಸೇನ್, ಪೊತಲಕಟ್ಟಿ ಮಹೇಶಪ್ಪ, ಬೆಂಡಿಗೇರಿ ಸಣ್ಣತಾಂಡ ರಮೇಶನಾಯ್ಕ ಮತ್ತು ಜಿಲ್ಲಾ ಪ್ರತಿನಿಧಿಯಾಗಿ ನಂದಬೇವೂರು ಮಂಜುನಾಥ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net